ಮುರುಳ್ಯ- ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಂತಿಕಲ್ಲು ಇದರ ವಾರ್ಷಿಕ ಮಹಾಸಭೆ, ಶಾಸಕರಿಗೆ ಸನ್ಮಾನ

0

ಮರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ಮಹಾ ಸಭೆಯು ಸಂಘದ ಪ್ರಧಾನ ಕಚೇರಿ ಸಾಧನಾ ಸಹಕಾ ಸೌಧ ನಿಂತಿಕಲ್ಲಿನಲ್ಲಿ ಸಂಘದ ಅಧ್ಯಕ್ಷ ಶ್ರೀಮತಿ ಕುಸುಮಾವತಿ ರೈ ಕೆ.ಜಿ. ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸಂಘದ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಪ್ರಸನ್ನ ಕೆ. ಮತ್ತು ಸಂಘದ ಹಿರಿಯ ಸದಸ್ಯ ಹಾಗೂ ಪ್ರಗತಿಪರ ಕೃಷಿಕ ಕೃಷಿ ಪ್ರಶಸ್ತಿ ಪುರಸ್ಕೃತ ದಯಾನಂದ ಕೋಟೆಯವರು ದೀಪ ಪ್ರಜ್ವಲನೆ ಮಾಡಿ ಶುಭ ಹಾರೈಸಿದರು. ಸಂಘದ ಉಪಾಧ್ಯಕ್ಷೆ ಹಾಗೂ ಪ್ರಸ್ತುತ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮರುಳ್ಯರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಹತ್ತನೇ ತರಗತಿ ಮತ್ತು ಪಿಯುಸಿ ಉತ್ತೀರ್ಣರಾದ ಸಂಘದ ಸದಸ್ಯರ ಮಕ್ಕಳನ್ನು ಗುರುತಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಕಳೆದ ಸಾಲಿನಲ್ಲಿ 50 ಲಕ್ಷದ 89 ಸಾವಿರದ ,18 ರೂಪಾಯಿ 30 ಪೈಸೆ ಲಾಭಗಳಿಸಿದೆ. ಸದಸ್ಯರ ಗಣನೀಯ ಪ್ರೋತ್ಸಾಹವೇ ಇದಕ್ಕೆ ಮುಖ್ಯ ಕಾರಣ ಮತ್ತು ಇನ್ನೂ ಸಹಕರಿಸಬೇಕೆಂದು ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ ರೈ ಕೆ. ಜಿ. ಹೇಳಿದರು.
ವೇದಿಕೆಯಲ್ಲಿ ನಿರ್ದೇಶಕರುಗಳಾದ ರಘುನಾಥ ರೈ ಕೆ.ಎನ್., ವಸಂತ ನಡುಬೈಲು, ರೂಪರಾಜ ರೈ ಕೆ., ವಸಂತ ಹುದೇರಿ, ರಾಜಶೇಖರ ಶೃಂಗೇರಿ, ದಿನೇಶ್ ಹೆಚ್. ಹೇಮಳ, ಪುರುಷೋತ್ತಮ ಆಚಾರ್ಯ ಕುಕ್ಕುಟೆ, ದಿನೇಶ್ ಎ . ಪಜಿಂಬಿಲ, ಶೇಖರ ಎ., ಶ್ರೀಮತಿ ನಳಿನಿ ಸೀತಾರಾಮ ರೈ ಊರುಸಾಗು ಉಪಸ್ಥಿತರಿದ್ದರು.
ಸಂಘದ ಕಾರ್ಯನಿರ್ವಹಣಾಧಿಕಾರಿ ಚಿದಾನಂದ ರೈ ಎನ್. ಕಾರ್ಯಕ್ರಮ ನಿರೂಪಿಸಿ, ವರದಿ ವಾಚಿಸಿದರು. ನಿಧನ ಹೊಂದಿದ ಸಂಘದ ಸದಸ್ಯರ ನೆನಪಿಗಾಗಿ ಸಂತಾಪ ಸೂಚಿಸಲಾಯಿತು.

ಸಂಘದ ಸಿಬ್ಬಂದಿಗಳಾದ ಸುದೀನ್ ಕುಮಾರ್ ರೈ ಕೆ.ಜಿ., ಶ್ರೀಮತಿ ಹರ್ಷಿತಾ ಪಿ. ಸಿ., ಶ್ರೀಮತಿ ಆಶಾ ಕಿರಣ ಸಿ., ರಮೇಶ್ ಎ., ಸುಭಾಶ್ಚಂದ್ರ ರೈ ಕೆ., ದೇವಿಪ್ರಸಾದ್ ಹೆಚ್., ವಸಂತ ರೈ ಕೆ., ಶ್ರೀಮತಿ ಲಕ್ಷ್ಮಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

ವಸಂತ ನಡುಬೈಲು ಸ್ವಾಗತಿಸಿದರು. ಸಂಘದ ಅಧ್ಯಕ್ಷೆ ಕುಸುಮಾವತಿ ರೈ ಕೆ.ಜಿ. ವಂದಿಸಿದರು.
(ವರದಿ : ಸಂಕಪ್ಪ ಸಾಲಿಯನ್ ಅಲೆಕ್ಕಾಡಿ)