ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ :ಪಂಜ ಕಾಲೇಜಿನ ಶೇ.100 ಫಲಿತಾಂಶ ಸಾಧನೆಗೆ – ಸನ್ಮಾನ

0

ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಮಂಗಳೂರು ಇದರ ವತಿಯಿಂದ
ಮಂಗಳೂರಿನ ಅಲೋಸಿಯಸ್ ಪಿ. ಯು.ಕಾಲೇಜಿನಲ್ಲಿ ಸೆ.17 ರಂದು ನಡೆದ ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ , 2023ರ ಸಾಲಿನ ದ್ವಿತೀಯ ಪಿಯು.ಸಿ ಯಲ್ಲಿ ಶೇಕಡ100 ಫಲಿತಾಂಶ ಗಳಿಸಿದ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಶೇಷ ಸಾಧನೆಯನ್ನು ಗುರುತಿಸಿ ,ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಜೊತೆಗೆ ಉಪನ್ಯಾಸಕರಾದ
ಚಿದಾನಂದ,ರೂಪಕಲಾ,ವ್ಯೆಷ್ಣವಿ ಕಮಲಾಕ್ಷ, ಉಮೇಶ ರವರನ್ನು ಸನ್ಮಾನಿಸಲಾಯಿತು.
.