ಕೆವಿಜಿ ಐಪಿಎಸ್‌ನಲ್ಲಿ ಗೌರಿ ಗಣೇಶ ಹಬ್ಬದ ಆಚರಣೆ

0

ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಕಿಂಡರ್ ಗಾರ್ಡನ್ ವಿಭಾಗದಲ್ಲಿ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಇವರ ಶುಭ ಹಾರೈಕೆಯಿಂದ ಗೌರಿ ಗಣೇಶ ಹಬ್ಬವನ್ನು ಸೆ.16 ರಂದು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಪುಟಾಣಿ ಮಕ್ಕಳು ವಿಘ್ನೇಶ್ವರನ ಭಜನೆ, ಶ್ಲೋಕಗಳನ್ನು ಹೇಳಿ, ಸಿಹಿ ತಿಂಡಿಯನ್ನು ಹಂಚಿ ಸಂಭ್ರಮಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ, ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪಾ ಬಿದ್ದಪ್ಪ, ಅಮರ ಜ್ಯೋತಿ ಪಿಯು ಕಾಲೇಜಿನ ಪ್ರಾಂಶುಪಾಲೆ ಡಾ. ಯಶೋಧ ರಾಮಚಂದ್ರ, ಡೆಂಟಲ್ ಕಾಲೇಜಿನ ಮಾಧವ ಬಿ. ಟಿ, ಶಾಲೆಯ ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.