ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಇದರ ೨೦೨೨-೨೩ರ ವಾರ್ಷಿಕ ಮಹಾಸಭೆ ಸಹಕಾರಿ ಸಂಘದ ಸಮನ್ವಯ ಸಭಾಭವನದಲ್ಲಿ ಅ.೧೮ರಂದು ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ವಹಿಸಿದ್ದರು. ಸಂಸ್ಥೆ ನಿರ್ದೇಶಕರಾದ ಗಣಪತಿ ಭಟ್, ಸುಮತಿ ಶಕ್ತಿವೇಲು, ಕೆ.ಪಿ ಜಾನಿ, ಜಗದೀಶ್ ರೈ, ಹಮೀದ್, ಪಿ.ಲ್ ಆನಂದ, ಉಷಾ ಕೆ ಎಮ್, ಯಮುನಾ ಬಿ.ಎಸ್ ,ಚಂದ್ರಶೇಖರ್, ಪ್ರಕಾಶ್, ಶ್ರೀ ಮತಿ ರಾಜೀವಿ, ಬಾಲಕೃಷ್ಣ, ಮುಖ್ಯಕಾರ್ಯನಿರ್ವಾಣಾಧಿಕಾರಿ ವೀರೇಂದ್ರಕುಮಾರ್ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಮಹಮ್ಮದ್ ಕುಂಜಿ ಗೂನಡ್ಕ ಸ್ವಾಗತಿಸಿದರು. ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಪ್ರಸ್ತಾವಿಕ ಭಾಷಣ ಮಾಡಿದರು.