ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷ ಉಳಿಸಿ ಆಂದೋಲನ : ಲಯನ್ಸ್ ಕ್ಲಬ್ ನಲ್ಲಿ ಕಾರ್ಯಕರ್ತರ ಸಭೆ

0

ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು

ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನೊಳಗೆ ಬಣಗಳಾಗಿ ಆ‌ ಬಳಿಕ ನಡೆದ ಹಲವು‌ ವಿದ್ಯಾಮಾನಗಳು ನಡೆದವು. ಇಂದು‌ ಕಾಂಗ್ರೆಸ್ ನ ಒಂದು‌ ಬಣದ ‌ಕಾರ್ಯಕರ್ತರು ಸೇರಿ ಸುಳ್ಯ‌ ಲಯನ್ಸ್ ಸೇವಾ ಸದನದಲ್ಲಿ ಕಾಂಗ್ರೆಸ್ ಪಕ್ಷ ಉಳಿಸಿ ಆಂದೋಲನಾ ಸಭೆ ನಡೆಯಿತು.‌

ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರಹಾಕಿದರು.

ಸಭೆ ಆರಂಭವಾಗುತ್ತಿದ್ದಂತೆ ಮಾತನಾಡಿದ ಮಹೇಶ್ ಕುಮಾರ್ ಕರಿಕ್ಕಳರು “ನಾವು ಪಕ್ಷ ವಿರೋಧ ಕೆಲಸ ಮಾಡದಿದ್ದರೂ ನಮ್ಮನ್ನು ಕೆಲವರ ಒತ್ತಡದಿಂದಾಗಿ ಉಚ್ಚಾಟನೆ ಮಾಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಬೇಕೆಂದೇ ಪ್ರಾಮಾಣಿಕವಾಗಿ ದುಡಿದವರು ನಾವು. ಪಕ್ಷದಲ್ಲಿ ಉತ್ತಮ ನಾಯಕತ್ವ ಬೇಕೆಂದು ನಾವು ಬಯಸುವುದು. ಗೆದ್ದರೂ ಸೋತರೂ ಪಕ್ಷದ ಜತೆಯಾಗಿಯೇ ಇರುವವರು ನಾವು ಎಂದು ಹೇಳಿದರು.

ಬಾಲಕೃಷ್ಣ ‌ಮರೀಲ್ ಮಾತನಾಡಿ ಪಕ್ಷ ಸಂಘಟನೆಗೆ ನಾವು ಪ್ರಾಮಾಣಿಕ ದುಡಿದಿದ್ದೇವೆ. ಪಕ್ಷದ ವಿಚಾರ ಮಾತನಾಡುವುದಾದರೆ ತುಂಬಾ ಇದೆ. ನಮಗೆ ನೋವಾಗಿದೆ. ಅದನ್ನು ನಾವು ಹೇಳಬೇಕಾಗುತ್ತದೆ. ಮೊನ್ನೆ ನಡೆದ ನೇಮಕಾತಿಯ ಹಿಂದ ಕಾಂಗ್ರೆಸ್ ಪಕ್ಷದವರೇ ಇದ್ದಾರೆನ್ನುವುದು ಹೇಳಬೇಕಾಗುತ್ತದೆ ಎಂದು‌ಹೇಳಿದರು.

ಸುಬ್ರಹ್ಮಣ್ಯದ ರವೀಂದ್ರ ರುದ್ರಪಾದರು ಮಾತನಾಡಿ ಯಾವುದೇ ತಪ್ಪೆಸಗದ 17 ಮಂದಿಯನ್ನು ಉಚ್ಚಾಟನೆ ಎಂದು ಬಿಂಬಿಸಿದ್ದಾರೆ. ಅದನ್ನು‌ ಹಿಂಪಡೆದು‌ ಮತ್ತೆ ಪತ್ರಿಕೆಯಲ್ಲಿ ಪ್ರಕಟಿಸಬೇಕು. ಹಾಗಿದ್ದರೆ ಮಾತ್ರ ನಾವು ಪಕ್ಷದಲ್ಲಿ ಸಕ್ರಿಯರಾಗುತ್ತೇವೆ. ಕಾಂಗ್ರೆಸ್ ನಲ್ಲಿದ್ದು ಜೆಡಿಎಸ್ ಗೆ ಹೋಗಿದ್ದಾರೆ, ಗುತ್ತಿಗಾರಿನಲ್ಲಿ ಕಾಂಗ್ರೆಸ್ ನ ದೊಡ್ಡ ನಾಯಕರು ಬಿಜೆಪಿಯೊಂದಿಗೆ ಸೊಸೈಟಿ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಅವರ ಉಚ್ಚಾಟನೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ಪರಶುರಾಮ ಚಿಲ್ತಡ್ಕ ಮಾತನಾಡಿ “ಸುಳ್ಯದ ಕಾಂಗ್ರೆಸ್ ಸ್ಥಿತಿ ನೋಡುವಾಗ ಬೇಸರವಾಗುತ್ತದೆ. ಇಲ್ಲಿ ಕಾರ್ಯಕರ್ತರ ಮಾತಿಗೆ ಬೆಲೆ ಇಲ್ಲ. ನಾನು ಯಾವತ್ತಿದ್ದರೂ ಕಾಂಗ್ರೆಸ್ ಸ್ಸಿಗನಾಗಿಯೇ ಇರುತ್ತೇನೆ” ಎಂದು‌ ಹೇಳಿದರು.

ಬಶೀರ್ ಅಹ್ಮದ್ ನೇಲ್ಯಮಜಲು ಮಾತನಾಡಿ ಕಾರ್ಯಕರ್ತರ ಮಾತನ್ನು ನಾಯಕರು‌ ಕೇಳಿದರೆ ಪಕ್ಷ ಬೆಳೆಯುತ್ತದೆ. ಆದರೆ ಇಲ್ಲಿ ಆ ರೀತಿ ಮಾಡುತ್ತಿಲ್ಲ. ಆದ್ದರಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ಸೀಮಿತ ನಾಯಕರು ಮಾತ್ರ ಅಧಿಕಾರ ಬಳಸಿಕೊಳ್ಳುತ್ತಿರುವುದು ಬೇಸರ ಸಂಗತಿ ಎಂದು ಹೇಳಿದರು.

ಬ್ಲಾಕ್ ಮಾಜಿ ಅಧ್ಯಕ್ಷ ಎಂ.ವೆಂಕಪ್ಪ ಸಹಿತ ಸುಮಾರು 70 ಅಧಿಕ ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.