ಪರಂಪರೆ ಉಳಿಸುವ ಕಾರ್ಯ ನಿರಂತರವಾಗಲಿ : ಶಾಸಕಿ ಭಾಗೀರಥಿ ಮುರುಳ್ಯ
ಸಮಾಜದ ಎಲ್ಲರೂ ಒಟ್ಟಾಗಿ ಈ ದೇಶದ ಸಂಸ್ಕ್ರತಿ, ಸಂಸ್ಕಾರ ಪರಂಪರೆಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಮಾಡೋಣ. ನಮ್ಮ ಎಲ್ಲ ಹಬ್ಬಗಳು ನಮ್ಮಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಗೊಳಿಸುತ್ತದೆ. ಆ ನಿಟ್ಟಿನಲ್ಲಿ ಸಾಂಸ್ಕೃತಿಕ ಸಂಘ ಹಳೆಗೇಟು ಇವರು ನಡೆಸುವ ಕಾರ್ಯ ನಿರಂತರವಾಗಿರಲಿ ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸೆ.19 ರಂದು ಸುಳ್ಯದ ಹಳೆಗೇಟು ಸಾಂಸ್ಕೃತಿಕ ಸಂಘ ಇದರ ಆಶ್ರಯದಲ್ಲಿ ನಡೆದ 40 ನೇ ವರ್ಷದ ಗಣೇಶೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಶಾಸಕರು ಮಾತನಾಡಿದರು.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿ ಗೊಳಿಸುವ ಕಾರ್ಯ ಸಾಂಸ್ಕೃತಿಕ ಸಂಘದಿಂದ ನಡೆಯುತ್ತಿದೆ ಎಂದು ಹೇಳಿದರು.
ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಹಳೆಗೇಟು ಅಧ್ಯಕ್ಷತೆ ವಹಿಸಿದ್ದರು.
ಸಂಘದ ಉಪಾಧ್ಯಕ್ಷ ಬಾಲಗೋಪಾಲ ಸೇರ್ಕಜೆ, ಕಾರ್ಯದರ್ಶಿ ಶಿವನಾಥ ರಾವ್ ವೇದಿಕೆಯಲ್ಲಿದ್ದರು.
ಸಂಘದ ಜತೆ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ಸ್ವಾಗತಿಸಿದರು. ಕಿಶನ್ ಹಳೆಗೇಟು ಕಾರ್ಯಕ್ರಮ ನಿರೂಪಿಸಿದರು.