ಬೆಳ್ಳಾರೆ ವಿರಾಟ್ ಫ್ರೆಂಡ್ಸ್ ವತಿಯಿಂದ ಶ್ರೀ ಗಣೇಶೋತ್ಸವ – ಧಾರ್ಮಿಕ ಸಭೆ

0

ಸಂಘಟನೆಯಿಂದ ಧರ್ಮ ಜಾಗೃತಿ – ಕು.ಹಾರಿಕ ಮಂಜುನಾಥ

ಮನರಂಜಿಸಿದ “ಗುಸು ಗುಸು ಉಂಡುಗೆ” ತುಳು ಹಾಸ್ಯಮಯ ನಾಟಕ

“ಗಣೇಶೋತ್ಸವ ಆಚರಣೆಗಳು ಎಲ್ಲಾ ಕಡೆಗಳಲ್ಲಿ ಅತ್ಯಂತ ವೈಭವದಿಂದ ನಡೆಯುತ್ತದೆ.ಧರ್ಮದ ಜಾಗೃತಿಗಾಗಿ ಗಣೇಶೋತ್ಸವ ಆಚರಣೆಗಳು ನಡೆಯುತ್ತದೆ.ಯುವಕರು ಸಂಘಟಿತರಾಗಬೇಕು.ಸಂಘಟಿತರಾದಾಗ ಮಾತ್ರ ಧರ್ಮ ಜಾಗೃತಿ ಸಾಧ್ಯ” ಎಂದು ಕು.ಹಾರಿಕ ಮಂಜುನಾಥರವರು ಹೇಳಿದರು.ಅವರು ಬೆಳ್ಳಾರೆ ಸಾರ್ವಜನಿಕ ಸಾಂಸ್ಕೃತಿಕ ಗಣೇಶೋತ್ಸವ ಸಮಿತಿ,ವಿರಾಟ್ ಫ್ರೆಂಡ್ಸ್ ವತಿಯಿಂದ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ಮಕ್ಕಳಿಗೆ ತಾಯಂದಿರು ಸಂಸ್ಕೃತಿಯನ್ನು ಮನೆಯಿಂದಲೇ ಕಲಿಸಬೇಕು.ಧಾರ್ಮಿಕ ವ
ಕಾರ್ಯಕ್ರಮಗಳ ಬಗ್ಗೆ ತಿಳಿಸಬೇಕು. ಧರ್ಮ ಜಾಗೃತಿಯಾಗಬೇಕು.ನಾವೆಲ್ಲ ಹಿಂದು ನಾವೆಲ್ಲ ಒಂದು ಎಂದಾಗ ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಅವರು ಹೇಳಿದರು.

ಹಿಂದೂ ಮುಖಂಡರಾದ ಸತ್ಯಜಿತ್ ಸುರತ್ಕಲ್ ರವರು ಸನಾತನ ಧರ್ಮದ ಬಗ್ಗೆ ,ಧರ್ಮದ ಉಳಿವಿನ ಬಗ್ಗೆ ಮಾತನಾಡಿದರು.

ಸನ್ಮಾನ
ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಜಯರಾಮ ಉಮಿಕ್ಕಳರವರನ್ನು ವಿರಾಟ್ ಫ್ರೆಂಡ್ಸ್ ವತಿಯಿಂದ ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಯರಾಮ ಉಮಿಕ್ಕಳರವರು ಕೃತಜ್ಞತೆ ಸಲ್ಲಿಸಿದರು.
ವಿರಾಟ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಬೆಳ್ಳಾರೆ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ನಮಿತಾ ಎಲ್ ರೈ, ಗ್ರಾಮ ಪಂಚಾಯತ್ ಸದಸ್ಯ ಎನ್.ಎಸ್.ಡಿ.ವಿಠಲದಾಸ್, ಬೆಳ್ಳಾರೆ ಜಲದುರ್ಗಾ ಲಯನ್ಸ್ ಕ್ಲಬ್ ಅಧ್ಯಕ್ಷ ವಿಠಲ ಶೆಟ್ಟಿ,ವಿರಾಟ್ ಫ್ರೆಂಡ್ಸ್ ಗೌರವಾಧ್ಯಕ್ಷ ಮಿಥುನ್ ಶೆಣೈ,ಕಾರ್ಯದರ್ಶಿ ಜೀವನ್ ಕಾವಿನಮೂಲೆ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಸಂಘ,ಸಂಸ್ಥೆಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಮಾಜಿ ಅಧ್ಯಕ್ಷ ಮನೋಹರ ಬಾಯಂಬಾಡಿ ಸ್ವಾಗತಿಸಿ,ಕು.ದೃತಿ ಪಡ್ಪು ಸ್ಬಾಗತಿಸಿ, ಪ್ರದೀಪ್ ಕುಮಾರ್ ರೈ ಪನ್ನೆ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಜೀವನ್ ಕಾವಿನಮೂಲೆ ವಂದಿಸಿದರು.

ಶ್ರೀ ದೇವರಿಗೆ ವಿಶೇಷ ರಂಗಪೂಜೆ

ಸಭಾ ಕಾರ್ಯಕ್ರಮ ನಡೆದ ಬಳಿಕ ಶ್ರೀ ದೇವರಿಗೆ ವಿಶೇಷ ರಂಗಪೂಜೆ ನಡೆಯಿತು.ಬಳಿಕ ಮಹಾಪೂಜೆ ನಡೆಯಿತು.ಗಣಪತಿ ಪ್ರತಿಷ್ಠಾಪಿಸಿದ ಸಭಾಭವನದಲ್ಲಿ ವಿಶೇಷವಾಗಿ ದೀಪಾಲಂಕಾರ ನಡೆಯಿತು.ಮಹಾಪೂಜೆ ನಡೆದ ಬಳಿಕ ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.

ಮನರಂಜಿಸಿದ ಗುಸು ಗುಸು ಉಂಡುಗೆ

ಶ್ರೀ ದೇವರಿಗೆ ರಂಗಪೂಜೆ,ಮಹಾಪೂಜೆ,ಅನ್ನಸಂತರ್ಪಣೆ ನಡೆದ ಬಳಿಕ ತುಳು ಹಾಸ್ಯಮಯ ನಾಟಕ “ಗುಸು ಗುಸು ಉಂಡುಗೆ” ನಡೆಯಿತು.
ತುಳು ನಾಟಕ ಸೇರಿದ ಜನರನ್ನು ಮನರಂಜಿಸಿತ್ತು.
ಸಾವಿರಾರು ಜನರು ನಾಟಕವನ್ನು ವೀಕ್ಷಿಸಿದರು.