ಗಾಂಧಿನಗರ ಕೆ. ಪಿ. ಎಸ್ ಜೂನಿಯರ್ ಕಾಲೇಜ್ ಇತಿಹಾಸ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳಿಂದ ಪ್ರತಿಭಟನೆ

0

ಪೊಲೀಸ್ ಮಧ್ಯ ಪ್ರವೇಶ, ಪ್ರತಿಭಟನೆಗೆ ಅನುಮತಿ ಕೊಡಿ ಎಂದು ಆಗ್ರಹಿಸಿ ಕಾಲೇಜು ಕಾಂಪೌಂಡ್ ಮುಂಭಾಗ ಕುಳಿತ ವಿದ್ಯಾರ್ಥಿಗಳು

ಗಾಂಧಿನಗರ ಕೆಪಿಎಸ್ ಜೂನಿಯರ್ ಕಾಲೇಜ್ ನ ಇತಿಹಾಸ ಉಪನ್ಯಾಸಕರು ಕಳೆದ ಒಂದು ತಿಂಗಳಿನಿಂದ ಶಾಲೆಗೆ ಬರಲಿಲ್ಲವೆಂದು ಆರೋಪಿಸಿ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ ಹಾಗೂ ಕೂಡಲೆ ನಮಗೆ ಉಪನ್ಯಾಸಕರನ್ನು ನೀಡಬೇಕೆಂದು ಆಗ್ರಹಿಸಿ ಕಾಲೇಜಿನ ಕಾಮರ್ಸ್ ಮತ್ತು ಆರ್ಟ್ಸ್ ವಿದ್ಯಾರ್ಥಿಗಳು ಕಾಲೇಜು ಗೇಟಿನ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡ ಘಟನೆ ಇದೀಗ ವರದಿಯಾಗಿದೆ.

ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆಯನ್ನು ಖಾಸಗಿ ಬಸ್ಸು ನಿಲ್ದಾಣದ ಬಳಿ ಮಾಡಬೇಕೆಂದು ಮುಂದಾದಾಗ ಪೊಲೀಸರು ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಿದರು. ಯಾವುದೇ ಅನುಮತಿ ಪಡೆಯದೆ ಪ್ರತಿಭಟನೆ ನಡೆಸುವುದು ಸರಿಯಲ್ಲ. ನಿಮ್ಮ ಮನವಿಯ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ನೀಡಿ ಪರಿಹಾರವನ್ನು ಕಂಡುಕೊಳ್ಳಬೇಕು. ಏಕಾಏಕಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ತಿಳಿಹೇಳಿ ಮತ್ತೆ ತರಗತಿಗೆ ಕಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಸುದ್ದಿಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ಕಳೆದ ಒಂದು ತಿಂಗಳ ಹಿಂದೆ ಒಬ್ಬರು ಇತಿಹಾಸ ಉಪನ್ಯಾಸಕರು ಬಂದು ಕೇವಲ ಒಂದೇ ದಿನ ಪಾಠ ಮಾಡಿ ಹೋದವರು ಮತ್ತೆ ಬಾರಲೇ ಇಲ್ಲ.

ಇದರಿಂದ ನಮಗೆ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಶಾಸಕರಿಗೂ ಮತ್ತು ನಮ್ಮ ಕಾಲೇಜಿನ ಕಾರ್ಯಾಧ್ಯಕ್ಷರಿಗೂ ಮನವಿಯನ್ನು ನೀಡಿದ್ದೇವೆ. ಆದ್ದರಿಂದ ಇವತ್ತು ಈ ನಿರ್ಣಯವನ್ನು ಕೈಗೊಂಡು ನಾವು ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ಹೇಳಿದರು.