ಮರ್ಕಂಜದಲ್ಲಿ ಗ್ರಾಮ ಒನ್ ಜನ ಸೇವಾ ಕೇಂದ್ರದ ಉದ್ಘಾಟನೆ

0

ಮರ್ಕಂಜ ಗ್ರಾಮದ ಗೋಳಿಯಡ್ಕದಲ್ಲಿ ಭರತ್ ಬೊಮ್ಮಾರು ನೇತೃತ್ವದಲ್ಲಿ ಗ್ರಾಮ ಒನ್ ಜನಸೇವಾ ಕೇಂದ್ರವು ಸೆ.19 ರಂದು ಉದ್ಘಾಟನೆಗೊಂಡಿತು.ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಮತಿ ಗೀತಾ ಹೊಸೋಲಿಕೆ ರಿಬ್ಬನ್ ಕತ್ತರಿಸಿ ಕೇಂದ್ರವನ್ನು ಉದ್ಘಾಟಿಸಿದರು.

ಜಿ.ಪಂ.ಮಾಜಿ ಸದಸ್ಯಹರೀಶ್ ಕಂಜಿಪಿಲಿ ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿಹಿರಿಯರಾದ ಕೃಷ್ಣಪ್ಪ ಪೂಜಾರಿ, ಶ್ರೀಮತಿ ಸುಲೋಚನಾ,ಶ್ರೀಮತಿ ಪ್ರಜ್ಞಾಭರತ್ ಪೂಜಾರಿ ಹಾಗೂ ಬಂಧು ಮಿತ್ರರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ಜನಸೇವಾ ಕೇಂದ್ರದ ಭರತ್ ಬೊಮ್ಮಾರು ಸ್ವಾಗತಿಸಿ, ವಂದಿಸಿದರು.