ನೆಲ್ಲೂರು ಕೆಮ್ರಾಜೆ ಯುವಕ‌ ಮಂಡಲದ ವತಿಯಿಂದ 44ನೇ ವರ್ಷದ ಶ್ರೀ ಗಣೇಶೋತ್ಸವ ಆಚರಣೆ

0

ಭಜನಾ ಕಾರ್ಯಕ್ರಮ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ, ಸಭಾ ಕಾರ್ಯಕ್ರಮ, ವಿಜ್ರಂಭಣೆಯ ಶೋಭಾಯಾತ್ರೆ

ಪ್ರತಿಫಲಾಪೇಕ್ಷೆ ಇಲ್ಲದೇ ರಾತ್ರಿ ಹಗಲು ಕೇಸರಿಯ ಕೆಲಸ ಮಾಡುವ ಕಾರ್ಯಕರ್ತರು ಕುಣಿದಾಡಬೇಕು : ಅರುಣ್ ಕುಮಾರ್ ಪುತ್ತಿಲ

ಮತಕ್ಕೋಸ್ಕರ, ಅಧಿಕಾರಕ್ಕೋಸ್ಕರ ಧಾರ್ಮಿಕ ವಿಚಾರಗಳನ್ನು‌ ಬಳಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ನೋವು ಆತಂಕಗಳ ನಡುವೆ ಹಿಂದು ಸಮಾಜದ ಜೊತೆಗೆ ಶ್ರದ್ಧಾ ಬಿಂದುಗಳನ್ನು ರಕ್ಷಣೆ ಮಾಡುವ ಸಂಕಲ್ಪ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸಮಾಜದ ಮುಂದಿರುವ ಸವಾಲುಗಳನ್ನು ಮೆಟ್ಟಿನಿಂತು ಸಧೃಡ ಹಿಂದೂ ಸಮಾಜ ನಿರ್ಮಾಣವಾಗಬೇಕು.

ಶೋಭಾಯಾತ್ರೆಯನ್ನು ಕುಂಠಿತಗೊಳಿಸುವ ಅಥವಾ ಡಿ.ಜೆ.ಗಳನ್ನು ಮೊಟಕುಗೊಳಿಸುವಂತಹ ಅಧಿಕಾರ ಬಳಸಲು‌ ನಾವು ಬಿಡುವುದಿಲ್ಲ. ಪ್ರತಿಫಲಾಪೇಕ್ಷೆ ಇಲ್ಲದೇ ರಾತ್ರಿ ಹಗಲು ಕೇಸರಿ ಕೆಲಸಗಳನ್ನು ಮಾಡುವ ಕಾರ್ಯಕರ್ತರು ಕುಣಿದಾಡಬೇಕು ಎಂದು ಪುತ್ತೂರಿನ ಭಜರಂಗದಳ ಜಿಲ್ಲಾ ಮಾಜಿ ಸಂಯೋಜಕ ಅರುಣ್ ಕುಮಾರ್ ಪುತ್ತಿಲ‌ ಹೇಳಿದರು.ನೆಲ್ಲೂರು ಕೆಮ್ರಾಜೆ ಯುವಕ ಮಂಡಲದ ವತಿಯಿಂದ‌ 44ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮವು ಸೆ.19ರಂದು ಸ.ಹಿ.ಪ್ರಾ.ಶಾಲೆ ನಾರ್ಣಕಜೆಯ ವಠಾರದಲ್ಲಿ ನಡೆಯಿತು. ಇದರ ಶೋಭಾ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಬೆಳಿಗ್ಗೆ ಸ್ಥಳ ಶುದ್ಧಿ, ಗಣಪತಿ ಹೋಮ, ಗಣಪತಿ‌ ಪ್ರತಿಷ್ಠಾಪನೆ ನಡೆಯಲಿದೆ.

ಬಳಿಕ ದುರ್ಗಾಶ್ರೀ ಭಜನಾ ಮಂಡಳಿ ನಾರ್ಣಕಜೆ ಮತ್ತು ನಾಗಶ್ರೀ ಭಜನಾ ಮಂಡಳಿ ದಾಸನಕಜೆ ಮತ್ತು ಶ್ರೀ‌ ಮಂಜುನಾಥ ಮಹಿಳಾ‌ ಭಜನಾ‌ ಮಂಡಳಿಯವರಿಂದ ಭಜನಾ‌ ಕಾರ್ಯಕ್ರಮ ನಡೆಯಿತು. ಅಲ್ಲದೇ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು, ಮನೋರಂಜನ ಕಾರ್ಯಕ್ರಮ ಗಳು‌ ನಡೆಯಿತು. ಮಧ್ಯಾಹ್ನ 12ರಿಂದ ಶ್ರೀ ದೇವರಿಗೆ‌ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.ಸಭಾ ಕಾರ್ಯಕ್ರಮ ದ ಅಧ್ಯಕ್ಷೆಯನ್ನು ನೆಲ್ಲೂರು ಕೆಮ್ರಾಜೆ ಯುವಕ‌ ಮಂಡಲದ ಅಧ್ಯಕ್ಷ ಕೌಶಿಕ್ ಸುಳ್ಳಿ ವಹಿಸಿದ್ದರು.

ಮುಖ್ಯ ಅತಿಥಿಯಾಗಿದ್ದ ಸುದ್ದಿ ಚಾನೆಲ್‌ ವಿಭಾಗದ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆಯವರು ಮಾತನಾಡಿ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಯುವಕರನ್ನು ಸಂಘಟನಾತ್ಮಕವಾಗಿ ಬೆಳೆಸುತ್ತಿದೆ‌. ಸುವರ್ಣಮಹೋತ್ಸವದ ಹೊಸ್ತಿಲಲ್ಲಿ ಇರುವ ನಾರ್ಣಕಜೆ ಗಣೇಶೋತ್ಸವಕ್ಕೆ ಹಿರಿಯರು ಭದ್ರ ಅಡಿಪಾಯವನ್ನು ಹಾಕಿ ಕೊಟ್ಟಿದ್ದಾರೆ. ಅದನ್ನು ಯುವಕರು ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು.ನೆಲ್ಲೂರು ‌ಕೆಮ್ರಾಜೆ‌ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕುಮಾರ್ ಕೋಟೆಮಲೆ‌ ಉಪಸ್ಥಿತರಿದ್ದರು.ಬಳಿಕ ಜಬಳೆ ಎಲಿಮಲೆ ಮಾರ್ಗವಾಗಿ ಶೋಭಾಯಾತ್ರೆ ನಡೆದು ನಾರ್ಣಕಜೆ ಯಲ್ಲಿ‌ ಜಲಸ್ತಂಭನ ನಡೆಯಿತು.