ಗೂನಡ್ಕದಲ್ಲಿ ಮನೆಯೊಳಗೆ ಬಂದ ಕಾಳಿಂಗ ಸರ್ಪ

0

ಗೂನಡ್ಕದ ಪೆಲತ್ತಡ್ಕದ ಸನತ್ ಎಸ್.ಪಿ.ಯವರ ಮನೆಯೊಳಗೆ ಬಂದ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

ಮಧ್ಯಾಹ್ನ 12.30 ರ ಸುಮಾರಿಗೆ ಮನೆಯ ಟಿಪಾಯಿಯಡಿಯಲ್ಲಿ ಬುಸ್ ಗುಟ್ಟುವ ಶಬ್ದ ಕೇಳಿತೆಂದು, ಟೀಪಾಯಿಯಡಿಯಿಂದ ಶಬ್ದ ಬರುತ್ತಿರುವುದನ್ನು ಮನೆಯವರು ಗಮನಿಸಿದಾ ಕಾಳಿಂಗ ಸರ್ಪ ಇರುವುದು ಕಂಡು ಬಂತು. ತಕ್ಷಣ ಮನೆಯವರು ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು. ಇಲಾಖೆಯವರು ಹಾವು ಹಿಡಿಯುವ ಮೋಹನ್ ರಿಗೆ ತಿಳಿಸಿ ಅವರು ಸ್ಥಳಕ್ಕೆ ಬಂದು ಮನೆಯೊಳಗಿದ್ದ ಹಾವನ್ನು ಹಿಡಿದು ಅರಣ್ಯ ಇಲಾಖೆಯವರಿಗೆ ನೀಡಲಾಯಿತೆಂದು ತಿಳಿದುಬಂದಿದೆ.