ಕೆವಿಜಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ. ಇದರ ವಾರ್ಷಿಕ ಮಹಾಸಭೆ

0

16.08 ಕೋಟಿ ವ್ಯವಹಾರ, ಶೇ.6 ಡಿವಿಡೆಂಟ್ ಘೋಷಣೆ

ಕೆವಿಜಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ. ಇದರ ವಾರ್ಷಿಕ ಮಹಾಸಭೆಯು ಸೆ.23 ರಂದು ಕೆವಿಜಿ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಸಭಾಂಗಣದಲ್ಲಿ ನಡೆಯಿತು. ಸಭಾಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ.ರೇಣುಕ ಪ್ರಸಾದ್ ಕೆ.ವಿ. ವಹಿಸಿದ್ದರು. ಕೆವಿಜಿ ವಿದ್ಯಾ ಸಂಕೀರ್ಣದ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಕ್ಷೇಮಾಭ್ಯುದಯದ ದೃಷ್ಟಿಯಿಂದ 3೦.೧2.2009 ರಲ್ಲಿ ಸ್ಥಾಪಿಸಲ್ಪಟ್ಟ ಈ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಈ ವರ್ಷದಲ್ಲಿ ತನ್ನ 14 ನೇ ಮಹಾ ಸಭೆಯನ್ನು ನೆರವೇರಿಸಿತು.

ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಕೃಷ್ಣ ರಾಜ್ ರವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಗೊಂಡು, ಸಂಸ್ಥೆಯ ಅಧ್ಯಕ್ಷ ಡಾ. ರೇಣುಕ ಪ್ರಸಾದ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ವರದಿ ವರ್ಷದಲ್ಲಿ ಸುಮಾರು 16.೦8 ಕೋಟಿ ರೂಪಾಯಿಯಷ್ಟು ವ್ಯವಹಾರ ನಡೆಸಿದ್ದು ಸಹಕಾರಿ ಸದಸ್ಯರಿಗೆ ವಾಹನ ಖರೀದಿ ,ಮನೆ ದುರಸ್ತಿ, ಪೀಠೋಪಕರಣಗಳ ಖರೀದಿ, ಚಿನ್ನಾಭರಣ ಈಡಿನ ಸಾಲ ಮತ್ತು ವೈಯಕ್ತಿಕ ಜಾಮೀನು ಸಾಲಗಳನ್ನು ನೀಡುತ್ತಿದೆ ಎಂದು ಅಧ್ಯಕ್ಷರು ತಿಳಿಸಿದರು. ಇದರೊಂದಿಗೆ ಎಲ್ಲ ಸದಸ್ಯರು ಹಾಗೂ ವಿದ್ಯಾರ್ಥಿಗಳಿಗೆ ಅನಾರೋಗ್ಯ , ಅಪಘಾತ , ಮರಣದಂತಹ ಸಂದರ್ಭಗಳಲ್ಲಿ ನಿಗದಿತ ನಿಧಿಯನ್ನು ನೀಡಿ ಸಹಕರಿಸುತ್ತಿದ್ದೇವೆ ಎಂದು ತಿಳಿಸಿದರು.

ಪ್ರಸ್ತುತ ವರ್ಷದಲ್ಲಿ ಸಂಸ್ಥೆಗೆ ಬಂದ ಲಾಭಾಂಶದಲ್ಲಿ 6% ಡಿವಿಡೆಂಟ್ ಹಂಚುವ ಬಗ್ಗೆ ಸಭೆಯಲ್ಲಿ ಅಧ್ಯಕ್ಷರು ಘೋಷಿಸಿದರು. ಭವಿಷ್ಯದಲ್ಲಿ ಇನ್ನಷ್ಟು ಸೇವೆ ಮಾಡುವುದರ ಮೂಲಕ ಸಾರ್ವಜನಿಕರಿಗಾಗಿ ಶಾಖೆಗಳನ್ನು ತೆರೆಯುವ ಬಗ್ಗೆ ಚರ್ಚಿಸಲಾಯಿತು. ವೇದಿಕೆಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ)ಇದರ ನಿರ್ದೇಶಕಿ ಹಾಗೂ ಸಂಸ್ಥೆಯ ನಿರ್ದೇಶಕಿ ಡಾ.ಜ್ಯೋತಿ ಆರ್ ಪ್ರಸಾದ್, ಸಹಕಾರಿಯ ನಿರ್ದೇಶಕರು ಹಾಗೂ ಕೆವಿಜಿ ವಿದ್ಯಾಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಾಣಾಧಿಕಾರಿ ಡಾ.ಉಜ್ವಲ್ ಊರುಬೈಲು , ಸಹಕಾರಿಯ ಉಪಾಧ್ಯಕ್ಷ ಚಿದಾನಂದ ಬಾಳಿಲ, ನಿರ್ದೇಶಕರುಗಳಾದ ಮಾಧವ ಬಿ.ಟಿ., ಪ್ರಸನ್ನ ಕುಮಾರ್ ಕಲ್ಲಾಜೆ, ಭವಾನಿ ಶಂಕರ ಅಡ್ತಲೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ, ಬಾಲಸುಬ್ರಹ್ಮಣ್ಯ ಕೆ.ಬಿ., ಶ್ರೀಮತಿ ನೇತ್ರಾವತಿ ಡಾ.ಮನೋಜ್ ಅಡ್ಯಂತಡ್ಕ, ಪದ್ಮನಾಭ ಜೆ, ದಯಾನಂದ ಎ, ಪ್ರಭಾರ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಕರುಣಾಕರ ಕೆ. ಉಪಸ್ಥಿತರಿದ್ದರು.

ಇದರೊಂದಿಗೆ ಸಂಸ್ಥೆಯ ಗೌರವ ಸಲಹೆಗಾರದ ಮನಮೋಹನ ಕುರುಂಜಿ, ಸೂರಯ್ಯ ಸೂಂತೋಡು, ಪಿ.ಎಸ್. ಗಂಗಾಧರ, ಸಂತೋಷ್ ಕುತ್ತಮೊಟ್ಟೆ, ದಯಾನಂದ ಕುರುಂಜಿ, ಬಾಲಗೋಪಾಲ ಸೇರ್ಕಜೆ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ವಿಶೇಷವಾಗಿ 2022 & 23ನೇ ಸಾಲಿನ ನಿವ್ವಳ ಲಾಭಾಂಶ ಹಂಚಿಕೆ ಮತ್ತು ಹಳೆ ಮಾದರಿಯ ಬೈಲವನ್ನು ನೂತನವಾಗಿ ತಿದ್ದುಪಡಿ ಮಾಡುವ ಕುರಿತು ನಿರ್ಣಯಗಳನ್ನು ಕೈಗೊಳ್ಳಲಾಯಿತು.

14ನೇ ವರ್ಷ ದ ವಾರ್ಷಿಕ ಮಹಾಸಭೆಯ ಸವಿನೆನಪಿಗಾಗಿ 14 ಜನರಿಗೆ ಅದೃಷ್ಟ ಚೀಟಿಯಲ್ಲಿ ಆಯ್ಕೆಯಾದವರಿಗೆ ಬಹುಮಾನವನ್ನು ಸಂಸ್ಥೆಯ ಅಧ್ಯಕ್ಷರು ನೀಡಿದರು. ಇತರ ವಿಷಯಗಳ ಸಂದರ್ಭದಲ್ಲಿ ಗೌರವ ಸಲಹೆಗಾರರಾದ ಸೂರಯ್ಯ ಸೂಂತೋಡು ಮತ್ತು ಸಂತೋಷ್ ಕುತ್ತಮೊಟ್ಟೆ ಮಾತನಾಡಿ ಕೆಲವೊಂದು ಅಭಿವೃದ್ಧಿಯ ಸಲಹೆ ಹಾಗೂ ಸೂಚನೆಗಳನ್ನು ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಎಲ್ಲಾ ಅತಿಥಿಗಳನ್ನು ಸಂಸ್ಥೆ ಉಪಾಧ್ಯಕ್ಷರಾದ ಚಿದಾನಂದ ಗೌಡ ಬಾಳಿಲ ಸ್ವಾಗತಿಸಿ, ನಿರ್ದೇಶಕರಾದ ಮಾಧವ ಬಿ.ಟಿ. ವಂದಿಸಿದರು. ನಿರ್ದೇಶಕರಾದ ಭವಾನಿ ಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.