ಪೆರಾಜೆ ಕರ್ಗಲ್ಲಿನ ಗಣಿಗಾರಿಕೆ- ಸ್ಪೋಟಕಬಳಸದೇ ಗಣಿಗಾರಿಕೆ ನಡೆಸುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸೂಚನೆ ನೀಡಿರುವ ಹಿನ್ನಲೆಯಲ್ಲಿ ಪೆರಾಜೆ ಶ್ರೀ ಶಾಸ್ತಾವು ದೇವಳದಲ್ಲಿ ಸಾರ್ವಜನಿಕರಿಂದ ವಿಶೇಷ ಪೂಜೆ ನಡೆಯಿತು.
ಪೆರಾಜೆ ಗ್ರಾಮದ ಅಮಚೂರು ನಲ್ಲಿ ಗಣೇಶ್ ಭಟ್ ಎಂಬವರ ನೇತೃತ್ವದಲ್ಲಿ ಕರ್ಗಲ್ಲಿನ ಗಣಿಗಾರಿಕೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ವರ್ಷದಲ್ಲಿ ಹಲವಾರು ಬಾರೀ ಭೂಕಂಪಗಳು ಸಂಭವಿಸಿದರಿಂದ ಸಾರ್ವಜನಿಕಕರು ಸ್ಪೋಟಕ ಬಳಸದಂತೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ, ದೂರು ಸಲ್ಲಿಸಲಾಗಿತ್ತು. ಆದರೂ ಕ್ರಮಕೈಗೊಂಡಿಲ್ಲ. ಇದೀಗ ಈಗಿನ ಶಾಸಕರಾದ ಪೊನ್ನಣ್ಣ ಅವರಿಗೆ ಸ್ಥಳೀಯರು ಮತ್ತು ಸಾರ್ವಜನಿಕ ರು ಮನವರಿಕೆ ಮಾಡಿ, ಮನವಿಸಲ್ಲಿಸಲಾಗಿದ್ದು, ಕೂಡಲೇ ಮನವಿಗೆ ಸ್ಪಂದಿಸಿದ ಶಾಸಕರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸ್ಥಳ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದ ಕೂಡಲೇ ಇಲಾಖೆಯ ಅಧಿಕಾರಿ ಪರಿಶೀಲನೆ ನಡೆಸಿ, ಸ್ಪೋಟಕ ಬಳಸದೆ, ಮಾನವ ಶ್ರಮದ ಮೂಲಕ ಗಣಿಗಾರಿಕೆ ನಡೆಸುವಂತೆ ಗಣಿಗಾರಿಕೆಯ ಪಾಲುದಾರ ಗಣೇಶ್ ಭಟ್ ಗೆ ನೋಟಿಸ್ ನೀಡಲಾಗಿದೆ. ತಪ್ಪಿದಲ್ಲಿ ಕೆ.ಎಂ.ಎಂ.ಸಿ.ಆರ್ 1994 ರ ನಿಯಮಾನುಸಾರ ಕಾನೂನು ಕ್ರಮಕೈಗೊಳ್ಳುವುದಾಗಿ ಕೊಡಗು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚರಿಸಿದೆ. ಈ ಹಿನ್ನಲೆಯಲ್ಲಿ ಪೆರಾಜೆ ಶ್ರೀಶಾಸ್ತಾವು ದೇವಳದಲ್ಲಿ ಸ್ಥಳೀಯ ರು ಮತ್ತು ಸಾರ್ವಜನಿಕ ರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.