ಎಡಮಂಗಲ :ಹಾಲು ಸೊಸೈಟಿ ಮಹಾಸಭೆ- 10,01,572ನಿವ್ವಳ ಲಾಭ

0

ಶೇ.57ಪೈಸೆ ಬೋನಸ್, ಶೇ.22 ಪೈಸೆ ಡಿವಿಡೆಂಡ್ ಘೋಷಣೆ

ಎಡಮಂಗಲ ಹಾಲು ಉತ್ಪಾದಕರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಎಡಮಂಗಲದ ದೇವಾಲಯದ ಶಿವ ಪಾರ್ವತಿ ಸಭಾಭವನದಲ್ಲಿ ಅಧ್ಯಕ್ಷ ಕಟ್ಟಬೀಡು ಸುಧೀರ್ ಕುಮಾರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸೆ.೨೩ರಂದು ನಡೆಯಿತು.


ಕಳೆದ ಸಾಲಿನಲ್ಲಿ ಸಂಘವು ಲಾಭದತ್ತ ಮುನ್ನುಗ್ಗುತ್ತಿದ್ದು, ೧೦,೦೧,೫೭೨.೧೩ ರೂ. ಗಳಿಸಿ ಉತ್ಪಾದಕರಿಗೆ ಶೇ.57 ಪೈಸೆ ಬೋನಸ್ ನೀಡಲಾಗುವುದು. ಹಾಗೂ ಶೇ.22ಪೈಸೆ ಡಿವಿಡೆಂಡ್,ಹೈನುಗಾರ ಸದಸ್ಯರು ಹಾಲು ಪೂರೈಕೆ ಮಾಡಿ, ಉತ್ತೇಜನ ನೀಡಿದ ಫಲವಾಗಿ ಸಂಘವು ಅಭಿವೃದ್ಧಿ ಹೊಂದಿದ್ದು,ಹೈನುಗಾರ ಸದಸ್ಯರನ್ನು ಗುರುತಿಸಿ, ಪ್ರೋತ್ಸಾಹಿಸಲಾಯಿತು. ಮೂರನೇ ಬಾರಿ ತಾಲೂಕು ಉತ್ತಮ ಸಂಘ ಪ್ರಶಸ್ತಿ ಗಳಿಸಲು ಸದಸ್ಯರ ಸಹಕಾರ ಇದೆ. ಮುಂದಿನ ವರ್ಷ ಸಂಸ್ಥೆಯ ಬೆಳ್ಳಿ ಹಬ್ಬ ಆಚರಿಸಲಾಗುವುದು. ಇನ್ನು ಮುಂದೆಯೂ ಸದಸ್ಯರ ಸಹಕಾರ ನಿರೀಕ್ಷಿಸಲಾಗುತ್ತಿದೆ ಎಂದರು.

ಒಕ್ಕೂಟದ ಮ್ಯಾನೇಜರ್ ರಾಮಕೃಷ್ಣ ಭಟ್‌ರವರು ದೀಪಪ್ರಜ್ವಲಿಸಿ ಮಾತನಾಡಿದರು. ಸಂಘದ ಪರವಾಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅದೇ ರೀತಿ ಮೂರನೇ ಬಾರಿ ತಾಲೂಕಿನಲ್ಲಿ ಉತ್ತಮ ಸಂಘವೆಂದು ಪ್ರಶಸ್ತಿ ಪಡೆಯಲು ಕಾರಣಕರ್ತರಾದ ಕಾರ್ಯದರ್ಶಿಗಳಾದ ಮಾಧವ ವೈ ಇವರನ್ನು ಸನ್ಮಾನಿಸಲಾಯಿತು. ಅದೇ ರೀತಿ ತಾಲೂಕಿನ ಉತ್ತಮ ಕೃತಕ ಗರ್ಭಧಾರಣ ಪ್ರಶಸ್ತಿ ಪಡೆದ ಹರಿಯಪ್ಪ ಪಿ ಇವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಸಂಘದ ಅಭಿವೃದ್ಧಿಗೆ ಶ್ರಮಿಸಿದ ಮತ್ತು ಪ್ರಶಸ್ತಿ ಪಡೆಯಲು ಕಾರಣಕರ್ತರಾದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸಂಘದ ನಿರ್ದೇಶಕರಾದ ಎ.ಜೆ.ಜೋಸ್ಇವರನ್ನು ಸನ್ಮಾನಿಸಲಾಯಿತು ಇದೇ ಸಂದರ್ಭ ಹೈನುಗಾರರ ಸದಸ್ಯರ ಮಕ್ಕಳು ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಮತ್ತು DCM ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ‍್ಯಾಂಕ್ ಬಂದ ವಿದ್ಯಾರ್ಥಿನಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಅತೀ ಹೆಚ್ಚು ಹಾಲು ಪೂರೈಕೆ ಮಾಡಿದ ಬಾಲಕೃಷ್ಣ ರೈ ಕಿನ್ಯಾಳರವರನ್ನು ಬಹುಮಾನ ನೀಡಿ ಗುರುತಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕೂಟದ ಉಪ ವ್ಯವಸ್ಥಾಪಕರಾದ ಶ್ರೀ ಸತೀಶ್ ರಾವ್, ಪಶು ವೈದ್ಯಾಧಿಕಾರಿಗಳಾದ ಶ್ರೀ ಸಚಿನ್ ಕುಮಾರ್ ಎಸ್ ಎನ್ ವಿಸ್ತರಣಾಧಿಕಾರಿ ಹರೀಶ್‌ಕುಮಾರ್, ನಿರ್ದೇಶಕರುಗಳಾದ ಎ.ಜೆ.ಜೋಸ್,ಈಶ್ವರ ಗೌಡ,ಜಗದೀಶ್ ಶೆಟ್ಟಿ, ಜಯಪ್ರಕಾಶ್ ಕೆ., ಶ್ರೀಮತಿ ಚೋಮು, ಶ್ರೀಮತಿ ಜಯಶೀಲ ವೈ, ಹೊನ್ನಪ್ಪ ಗೌಡ ಎಂ., ಹೊನ್ನಪ್ಪ ಗೌಡ ಐಪಳ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ಹರಿಯಪ್ಪ ಪಿ, ಪ್ರೇಮಾ ಜೆ., ದಿನೇಶ್.ಕೆ., ರಾಜೀವಿ, ಹರ್ಷಿತ್‌ರಾಜ್, ಗಿರೀಶ್ ಎಂ. ವನಿತಾ ಕಾರ್ಯಕ್ರಮದಲ್ಲಿ ಸಹಕರಿಸಿದರು.


ವಿಜಯ ರಾಮಣ್ಣ ಪ್ರಾರ್ಥಿಸಿದರು. ಅಧ್ಯಕ್ಷ ಸುಧೀರ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಮಹಸಭೆಯ ವರದಿಯನ್ನು ಸಂಘದ ಕಾರ್ಯದರ್ಶಿಗಳಾದ ಮಾಧವ ವೈ ಓದಿದರು. ಸಿಬ್ಬಂದಿ ಹರ್ಷಿತ್‌ರಾಜ್ ವಂದಿಸಿದರು. ನಿವೃತ್ತ ಮುಖ್ಯ ಶಿಕ್ಷಕ ಬಾಲಕೃಷ್ಣ ಕೆ.ಕಾರ್ಯಕ್ರಮ ನಿರೂಪಿಸಿದರು.