ಸುಳ್ಯ ಎನ್ನೆoಪಿಯುಸಿಯಲ್ಲಿ” ವಾಚನಾಭಿರುಚಿ,ಬರಹ ಕಲೆ “ಕುರಿತು ಕಾರ್ಯಕ್ರಮ

0


ಬರಹವೊಂದರ ಹುಟ್ಟಿಗೆ ಚಿಂತನೆ, ಭಾವನೆ, ಕಲ್ಪನೆ ಕಾರಣ ವಾಗುವುದು. ಪುಸ್ತಕದೊಂದಿಗೆ ಸ್ನೇಹ ಬೆಳೆಸಿಕೊಂಡವರಿಗೆ ಒಂಟಿತನ ಕಾಡುವುದಿಲ್ಲ. ಓದುವ ಹವ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು. ನಮ್ಮ ಮನಸ್ಸನ್ನು ಅರಳಿಸುವ ಸಾಹಿತ್ಯ ಕೃತಿಗಳನ್ನು ಓದುವುದರಿಂದ ನಾವು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಮತ್ತು ಆ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯ ಎಂದು
ಕವಿ,ಸಮಾಜಸೇವಕ ಉದಯ ಭಾಸ್ಕರ್ ಸುಳ್ಯ
ಹೇಳಿದರು.ಅವರು ಸುಳ್ಯದ ನೆಹರು ಮೆಮೋರಿಯಲ್ ಪಪೂ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ “ವಾಚನಾಭಿರುಚಿ ಮತ್ತು ಬರಹ ಕಲೆ”ಕುರಿತು ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಉಪನ್ಯಾಸಕಿ ಸಾವಿತ್ರಿ ಕೆ,ಕನ್ನಡ ಉಪನ್ಯಾಸಕಿ, ಕಾರ್ಯಕ್ರಮ ಸಂಯೋಜಕಿ ಬೇಬಿ ವಿದ್ಯಾ ಪಿ ಬಿ ಉಪಸ್ಥಿತ ರಿದ್ದರು.ವಿದ್ಯಾರ್ಥಿನಿಯರಾದ ಆಜ್ಞ, ಪವಿತ್ರ,ಭೂಮಿಕಾ ಆಶಯ ಗೀತೆ ಹಾಡಿದರು.ಗಾಯತ್ರಿ ಪಿ ಸ್ವಾಗತಿಸಿದರು.ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ವಿದ್ಯಾರ್ಥಿಗಳಾದ ಕೃತ ಸ್ವರ ದೀಪ್ತ ಕೆ ಅತಿಥಿಗಳನ್ನು ಪರಿಚಯಿಸಿ,ಮಂಜು ಕೆ ವಂದಿಸಿದರು.ರಕ್ಷಿತಾ ಎಂ ನಿರೂಪಿಸಿದರು.ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.