ವರ್ಗಾವಣೆಗೊಂಡ ಪೋಲೀಸ್ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿಯವರಿಗೆ ಬೀಳ್ಕೊಡುಗೆ

0

ಪೋಲೀಸರಿಗೆ ಸಾರ್ವಜನಿಕ ಸೇವೆಯೇ ಮೊದಲ ಕರ್ತವ್ಯ : ಜೋಗಿ

ಪೋಲೀಸ್ ಇಲಾಖೆಗೆ ಸೇರಿದ ಪ್ರತಿಯೊಬ್ಬರಿಗೂ ಸಾರ್ವಜನಿಕ ಸೇವೆಯೇ ಮೊದಲ ಆದ್ಯತೆಯಾಗುತ್ತದೆ. ಅದರಲ್ಲಿಯೂ ಕಷ್ಟದಲ್ಲಿರುವವರಿಗೆ ನ್ಯಾಯಕೊಡಿಸಲು ನಾವು ಪ್ರಾಮಾಣಿಕ ಪ್ರಯತ್ನ ನಡೆಸಿದಾಗ ನಮ್ಮ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎಂದು ಸುಳ್ಯದಲ್ಲಿ ಸೇವೆ ಸಲ್ಲಿಸಿ ಇದೀಗ ವರ್ಗಾವಣೆಗೊಂಡಿರುವ ನವೀನ್ ಚಂದ್ರ ಜೋಗಿ ಹೇಳಿದರು.

ಸೆ.25 ರಂದು ಸುಳ್ಯದ ಬಂಟರ ಭವನದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

“ಪೋಲೀಸ್ ಇಲಾಖೆಯಲ್ಲಿ ಸೇವೆ ಮಾಡುವವರು ಭಾಗ್ಯವಂತರು. ಕಷ್ಟ ಹೇಳಿಕೊಂಡು ಬರುವವರು ನಮ್ಮಲ್ಲಿ ದೇವರನ್ನು ಕಾಣುತ್ತಾರೆ ಎಂದ ಅವರು ಸುಳ್ಯದಲ್ಲಿ ನಾನು ಸೇವೆ ಸಲ್ಲಿಸುವ ಸಂದರ್ಭ ಸುಳ್ಯ ಪ್ರತಿಯೊಬ್ಬರೂ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಪುತ್ತೂರು ಡಿವೈಎಸ್ ಪಿ ಗಾನಾ ಪಿ ಕುಮಾರ್ ಅಧ್ಯಕ್ಷತೆ ‌ವಹಿಸಿ, ವರ್ಗಾವಣೆಗೊಂಡ ನವೀನ್ ಚಂದ್ರ ಜೋಗಿಯವರನ್ನು ಸನ್ಮಾನಿಸಿದರು. ಹಾಗೂ ಸುಳ್ಯಕ್ಕೆ ನೂತನವಾಗಿ ಆಗಮಿಸಿದ ಸರ್ಕಲ್ ಇನ್ ಸ್ಪೆಕ್ಟರ್ ಮೋಹನ್ ಕೊಠಾರಿಯವರನ್ನು ಸ್ವಾಗತಿಸಿದರು.

ಬೆಳ್ಳಾರೆ ಸಬ್ ಇನ್ ಸ್ಪೆಕ್ಟರ್ ಅಶೋಕ್, ಸುಬ್ರಹ್ಮಣ್ಯ ಪೋಲೀಸ್ ಸಬ್ ಇನ್ ಸ್ಪೆಕ್ಟರ್ ಕಾರ್ತಿಕ್, ವಿಟ್ಲ ಪೋಲೀಸ್ ಠಾಣಾ ಸಬ್ ಇನ್ ಸ್ಪೆಕ್ಟರ್ ರತನ್ ಕುಮಾರ್ , ನಿವೃತ್ತ ಎಸ್.ಐ. ನಾರಾಯಣ ರೈ ಮೇನಾಲ, ನಿವೃತ್ತ ಎ.ಎಸ್.ಐ. ಚಂದಪ್ಪ ಗೌಡ ವೇದಿಕೆಯಲ್ಲಿ ಇದ್ದರು.

ಪೋಲೀಸ್ ಸಿಬ್ಬಂದಿಗಳಾದ ಮಂಜುನಾಥ್, ಸಂಧ್ಯಾಮಣಿ, ನ.ಪಂ. ಮಾಜಿ ಸದಸ್ಯ ಕೆ.ಎಂ.ಮುಸ್ತಫ, ನ.ಪಂ. ಸದಸ್ಯ ಎಂ.ವೆಂಕಪ್ಪ ಗೌಡ, ಕಾರ್ಮಿಕ ನಾಯಕ ಜಾನಿ ಕೆ.ಪಿ. ಅನಿಸಿಕೆ ವ್ಯಕ್ತಪಡಿಸಿದರು.

ಎಸ್.ಐ. ಈರಯ್ಯ ದೂಂತೂರು ಸ್ವಾಗತಿಸಿದರು. ನಿವೃತ್ತ ಎ.ಎಸ್.ಐ. ಭಾಸ್ಕರ ಅಡ್ಕಾರು ಕಾರ್ಯಕ್ರಮ ‌ನಿರೂಪಿಸಿದರು. ದೇವರಾಜ್ ಕೋಲ್ಚಾರ್ ‌ವಂದಿಸಿದರು.