ಸುಳ್ಯ : ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ವಿತರಣೆ

0

ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಸುಳ್ಯ ತಾಲ್ಲೂಕಿನ ವಿಕಲಚೇತನರಿಗೆ ಗುರುತಿನ ಚೀಟಿ ವಿತರಣೆ ಮತ್ತು ರಿನೀವಲ್ ಮಾಡುವ ಕ್ಯಾಂಪ್ ಸೆ.26ರಂದು ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆಯಿತು.

ನಗರ ಪಂಚಾಯತ್ ನ ವಿಕಲಚೇತನ ಇಲಾಖೆಯ ಮೇಲ್ವಿಚಾರಕ, ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಪಂಚಾಯತ್ ಗಳ ವಿ ರ್ ಡಬ್ಲ್ಯೂ ಉಮಾವತಿ ಐವರ್ನಾಡು, ಧರ್ಮಪಾಲ ಕೊಡಿಯಾಲ, ಕಾವೇರಿ ಗುತ್ತಿಗಾರು,

ಸದಾನಂದ ಜಾಲ್ಸೂರು, ದಿನೇಶ ಮಡಪ್ಪಾಡಿ, ಪುಷ್ಪಶ್ರೀ ಬೆಳ್ಳಾರೆ ಪವಿತ್ರ ವಿ ರ್ ಡಬ್ಲ್ಯೂ. ಕಡಬದ ವಿ ರ್ ಡಬ್ಲ್ಯೂ ವಿಶ್ವನಾಥ, ರಂಜಿನಿ ಮುರುಳ್ಯ, ಉಮ್ಮರ್ ಅಜ್ಜಾವರ ಮತ್ತು ದಾದಿ ನಯನ ಉಪಸ್ಥಿತರಿದ್ದರು. ವೈದ್ಯಧಿಕಾರಿ ಡಾ| ಕರುಣಾಕರ್ ನೇತೃತ್ವದಲ್ಲಿ ತಜ್ಞ ವೈದ್ಯರು ಸಹಕಾರ ನೀಡಿದರು. ಎಂಡೋ ಸೇರಿದಂತೆ ಹಲವಾರು ವಿಶೇಷ ಚೇತನರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.