ಶ್ರೀ ಶಿರಾಡಿ ದೈವಸ್ಥಾನ ಮತ್ತು ಗ್ರಾಮ ಪಂಚಾಯತ್ ಹರಿಹರ ಪಲ್ಲತ್ತಡ್ಕ ಇದರ ಆಶ್ರಯದಲ್ಲಿ ಬೆಟ್ಟುಮಕ್ಕಿ ಕ್ರೀಡಾಂಗಣಕ್ಕೆ ನಾಮಾಂಕಿತ ಕಾರ್ಯಕ್ರಮ ಸೆ. 28 ರಂದು ನಡೆದಿದ್ದು ದಿlಗಿರಿಯಪ್ಪ ಗೌಡ ಕಟ್ಟೆಮನೆ ಬಯಲು ರಂಗಮಂದಿರದಲ್ಲಿ ನಡೆಯಿತು.
ದಿlತಮ್ಮಯ್ಯ ಗೌಡ ಕೂಜುಗೋಡು ಕಟ್ಟೆಮನೆ ರವರ ಬಗ್ಗೆ ಡಾ.ಸೋಮಶೇಖರ ಕಟ್ಟೆಮನೆರವರು ಪ್ರಾಸ್ತವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮವನ್ನು ಶ್ರೀ ಶಿರಾಡಿ ದೈವಸ್ಥಾನದ ನಿಕಟ ಪೂರ್ವ ಅದ್ಯಕ್ಷರಾದ ಜಯರಾಮ ಆಲ್ಕಬೆ ಉದ್ಘಾಟಿಸಿ ಸಾರ್ವಜನಿಕ ಕ್ರೀಡಾಂಗಣಕ್ಕೆ ದಿl ಕೂಜುಗೋಡು ಕಟ್ಟೆಮನೆ ತಮ್ಮಯ್ಯ ಗೌಡ ಕ್ರೀಡಾಂಗಣವೆಂದು ನಾಮಾಂಕಿತ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಅದ್ಯಕ್ಷ ವಿಜಯ ಕುಮಾರ್ ಅಂಗಣ ವಹಿಸಿದ್ದರು. ವೇದಿಕೆಯಲ್ಲಿ ಹರಿಹರ ಗ್ರಾಮ ಪಂಚಾಯತ್‌ನ ಪಿಡಿಒ ಪುರುಷೋತ್ತಮ ಮಣಿಯಾನಮನೆ, ಶಿರಾಡಿ ದೈವಸ್ಥಾನದ ಗೌರವ ಅದ್ಯಕ್ಷರಾದ ನರಸಿಂಹ ಗೌಡ ಕೂಜುಗೋಡು ಕಟ್ಟೆಮನೆ, ಅಧ್ಯಕ್ಷರಾದ ಶ್ರೀ ವಸಂತ ಕಿರಿಭಾಗ,ಕೆ ವಿ ಜಿ ಆಯುರ್ವೇದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಣದಿಕಾರಿ ಡಾlಪುರುಷೋತ್ತಮ ಕಟ್ಟೆಮನೆ, ಮಾಜಿ ಮಂಡಲ ಪ್ರದಾನರಾದ ಸುದೀರ್ ಕಟ್ಟೆಮನೆ, ಊರಿನ ಹಿರಿಯರಾದ ಸುಂದರ ಗೌಡ ಮುಚ್ಚಾರ, ಗ್ರಾಮ ಪಂಚಾಯತ್‌ನ ಉಪಾಧ್ಯಕ್ಷರಾದ ಜಯಂತ ಬಾಳುಗೋಡು,ಸದಸ್ಯೆ ಶಿಲ್ಪಾ ಕೊತ್ನಡ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಈ ಸಂದರ್ಭ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು, ಕಿರಿಭಾಗ,ಬಾಳುಗೋಡು ಕುಟುಂಬಸ್ಥರು ಮತ್ತು ಊರ ಪರಊರ ಗ್ರಾಮಸ್ಥರು ಸಬೆಯಲ್ಲಿ ಹಾಜರಿದ್ದರು. ಯಶ್ಮಿತ ಬಾಳುಗೋಡು ಪ್ರಾರ್ಥಸಿ,ಲೊಕೇಶ್ ಕಟ್ಟೆಮನೆ ಸ್ವಾಗತಿಸಿ, ರಾಧಕೃಷ್ಣ ಕಟ್ಟೆಮನೆ ಧನ್ಯವಾದಗೈದರು, ಅಜಯ್ ಪೊಯ್ಯಮಜಲು ಕಾರ್ಯಕ್ರಮ ನಿರೂಪಿಸಿದರು.
✍️ಕುಶಾಲಪ್ಪ ಕಾಂತುಕುಮೇರಿ