ಜಾಲ್ಸೂರು : ಅಡ್ಕಾರು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಮಹ್ಫಿಲೆ ತ್ರೈಬಾ ಮಿಲಾದ್ ಫೆಸ್ಟ್ – 2023

0


ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ- ಮಿಲಾದ್ ಮೆರವಣಿಗೆ

ಜಾಲ್ಸೂರಿನ ಅಡ್ಕಾರು ಮುಹಿಯದ್ದೀನ್ ಜುಮಾ ಮಸೀದಿ, ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮಿಲಾದ್ ಫೆಸ್ಟ್ – 2023 ಕಾರ್ಯಕ್ರಮ ಸೆ. ೨೭ ರಂದು ಸಂಜೆ ಮದರಸ ವಠಾರದಲ್ಲಿ ನಡೆಯಿತು.

ಮದರಸ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ನಡೆದು ಬಳಿಕ ಬಹುಮಾನ ವಿತರಣೆ ಕಾರ್ಯ ನಡೆಯಿತು. ಇಂದು ಬೆಳಗ್ಗೆ ಮಿಲಾದ್ ಮೆರವಣಿಗೆ ನಡೆಯಿತು.


ಮಸೀದಿ ಸಮಿತಿಯವರು, ಮದ್ರಸ ಹಾಗೂ ಮಿಲಾದ್ ಕಮಿಟಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಿಲಾದ್ ಪೆಸ್ಟ್ ಕಾರ್ಯಕ್ರಮ ಸುದ್ದಿ ಯುಟ್ಯೂಬ್ ಚಾನೆಲ್ ನಲ್ಲಿ ನೇರ ಪ್ರಸಾರಗೊಂಡಿದ್ದು, ಸಾವಿರಾರು ಮಂದಿ ವೀಕ್ಷಿಸಿದರು.