ದಕ್ಷಿಣ ಕೊರಿಯಾದ ಸಾರಂಗ್ ಉತ್ಸವದಲ್ಲಿ ಸುಳ್ಯದವರು

0

ಭಾರತ ಸರಕಾರದ ಸಂಸ್ಕೃತಿ ಸಚಿವಾಲಯದ ಅಂಗ ಸಂಸ್ಥೆಯಾದ ಐಸಿಸಿಆರ್ ( Indian council for cultural relations) ಪ್ರಾಯೋಜಕತ್ವದಲ್ಲಿ ಅ.6 ರಿಂದಾ. 13 ರ ತನಕ ದಕ್ಷಿಣ ಕೊರಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಸಾರಂಗ್ ಉತ್ಸವದಲ್ಲಿ ಹಾಗೂ ಇತರ ವೇದಿಕೆಗಳಲ್ಲಿ ನಡೆಯುವ ನೃತ್ಯ ಕಾರ್ಯಾಗಾರದಲ್ಲಿ ಗಾನ ನೃತ್ಯ ಅಕಾಡೆಮಿ ಸಂಸ್ಥೆಯ ನಿರ್ದೇಶಕಿ ವಿದ್ಯಾಶ್ರೀ ರಾಧಾಕೃಷ್ಣ ಮತ್ತು ಅವರ ಶಿಷ್ಯೆ ಅಂಕಿತಾ ರೈ ರಂಜಾಳ ಭಾಗವಹಿಸಲಿದ್ದಾರೆ. ಒಟ್ಟು ಏಳು ಜನ ಸದಸ್ಯರಿದ್ದು ವಿದ್ಯಾಶ್ರೀ ರಾಧಾಕೃಷ್ಣ ತಂಡವನ್ನು ಮುನ್ನಡೆಸಲಿದ್ದಾರೆ. ಉಳಿದ ಐದು ಮಂದಿ ಸದಸ್ಯರು ಮಂಗಳೂರು ಸಂಸ್ಥೆಯ ವಿದ್ಯಾರ್ಥಿಗಳು.