ಸುಳ್ಯ: ಯಾದವ ಸಭಾ ತಾಲೂಕು ಸಮಿತಿ ವಾರ್ಷಿಕ ಮಹಾಸಭೆ

0

ಯಾದವ ಸಭಾ ಸುಳ್ಯ ತಾಲೂಕು ಸಮಿತಿಯ ವಾರ್ಷಿಕ ಮಹಾಸಭೆಯು ಸೆ.28ರಂದು ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ಜರುಗಿತು.
ಯಾದವಸಭಾ ಕೇಂದ್ರ ಸಮಿತಿ ಅಧ್ಯಕ್ಷ ಎ.ಕೆ. ಮಣಿಯಾಣಿ ಬೆಳ್ಳಾರೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು‌.
ಸುಳ್ಯ ತಾಲೂಕು ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಅವರು ಅಧ್ಯಕ್ಷತೆ ವಹಿಸಿದ್ದರು.

ತಾಲೂಕು ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಬೆಟ್ಟ ಅವರು ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ದಾಮೋದರ ಕೇನಾಜೆ ಅವರು ಲೆಕ್ಕಪತ್ರ ಮಂಡಿಸಿದರು.
ಮಹಿಳಾ ವೇದಿಕೆ ಕಾರ್ಯದರ್ಶಿ ಶ್ರೀಮತಿ ಚಂಚಲಾಕ್ಷಿ ಹಾಸ್ಪಾರೆ ಅವರು ಮಹಿಳಾ ವೇದಿಕೆಯ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು.
ಯುವ ವೇದಿಕೆಯ ವರದಿ ಮತ್ತು ಲೆಕ್ಕಪತ್ರವನ್ನು ಯುವ ವೇದಿಕೆ ಅಧ್ಯಕ್ಷ ವಿನೋದ್ ಕೊಯಿಂಗಾಜೆ ಮಂಡಿಸಿದರು.

ವೇದಿಕೆಯಲ್ಲಿ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಸುಧಾಮ ಆಲೆಟ್ಟಿ, ಮಂಗಳೂರು ಪ್ರಾದೇಶಿಕ ಸಮಿತಿ ಅಧ್ಯಕ್ಷ ಕೃಷ್ಣ ಮಣಿಯಾಣಿ ಪಡೀಲ್, ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಅಮೈ, ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಸುಳ್ಯ ತಾಲೂಕು ಸಮಿತಿ ಉಪಾಧ್ಯಕ್ಷರುಗಳಾದ ಕೃಷ್ಣ ಅಕ್ಕಪ್ಪಾಡಿ, ಬಾಲಕೃಷ್ಣ ಅಡ್ಡಬೈಲು, ತಾಲೂಕು ಸಮಿತಿ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ರಾಜೀವಿ ಪರ್ಲಿಕಜೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಯಾದವ ಸಭಾ ತಾಲೂಕು ಸಮಿತಿಯ ವತಿಯಿಂದ ನಡೆಸಲ್ಪಡುವ ಮುಂದಿನ ಕಾರ್ಯಕ್ರಮದ ಕುರಿತು ಚರ್ಚಿಸಲಾಯಿತು. ಯಾದವ ಸಭಾ ತಾಲೂಕು ಸಮಿತಿ ಮಾಜಿ ಅಧ್ಯಕ್ಷರುಗಳಾದ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜನಾರ್ದನ ಕಣಕ್ಕೂರು, ಸಂಪಾಜೆ ಪ್ರಾದೇಶಿಕ ಸಮಿತಿ ಅಧ್ಯಕ್ಷ ನಾರಾಯಣ ಬಾಲೆಂಬಿ, ಬೆಳ್ಳಾರೆ ಪ್ರಾದೇಶಿಕ ಸಮಿತಿ ಅಧ್ಯಕ್ಷ ಆನಂದ ಉಮಿಕ್ಕಳ, ಚಂದ್ರಹಾಸ ಬೆಳ್ಳಾರೆ, ನಿವೃತ್ತ ಯೋಧ ಸುಧಾನಂದ ಮಾವಿನಕಟ್ಟೆ, ಶ್ರೀಮತಿ ಯಶೋದಾ ಬಾಳೆಗುಡ್ಡೆ, ರಾಮಚಂದ್ರ ಮಾಸ್ತರ್ ಕೇನಾಜೆ, ಅಪ್ಪಯ್ಯ ಮಣಿಯಾಣಿ ಅಕ್ಕಪ್ಪಾಡಿ, ಶ್ರೀಮತಿ ಜಯಕೃಷ್ಣ ಕಾಯರ್ತೋಡಿ ಸೇರಿದಂತೆ ವಿವಿಧ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳು, ಸಮುದಾಯ ಬಾಂಧವರು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆ ನೀಡಿದರು. ಕು. ಮಾನ್ವಿ ಪ್ರಾರ್ಥಿಸಿ, ನಿವೃತ್ತ ಶಿಕ್ಷಕ ಅಚ್ಚುತ ಅಟ್ಲೂರು ಸ್ವಾಗತಿಸಿ, ಶ್ರೀಮತಿ ಸಾವಿತ್ರಿ ಕಣೆಮರಡ್ಕ ವಂದಿಸಿದರು.