ಸುಳ್ಯದಲ್ಲಿ ಸೀಮಾ ಮೆಮೆಂಟೋ ಗ್ಯಾಲರಿ ಶುಭಾರಂಭ

0

ಸುಳ್ಯದ ಜಯಂತ ರೈ ಹಾಗೂ ಶ್ರೀಮತಿ ರೂಪಶ್ರೀ ದಂಪತಿಗಳ ಮಾಲಕತ್ವದ ಸೀಮಾ ಮೆಮೆಂಟೋ ಗ್ಯಾಲರಿ ಸುಳ್ಯದ ಮುಖ್ಯ ರಸ್ತೆಯ ಶ್ರೀರಾಮ್ ಪೇಟೆಯ ಕೆನರಾ ಕಾಂಪ್ಲೆಕ್ಸ್ ನಲ್ಲಿ ಸೆ.29 ರಂದು ಶುಭಾರಂಭಗೊಂಡಿತು.

ಕೆ.ವಿ.ಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ
ಡಾ. ಲೀಲಾಧರ್ ಡಿ.ವಿ. ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ, ಬಂಟರ ಸಂಘದ ಅಧ್ಯಕ್ಷ ಎನ್. ಜಯಪ್ರಕಾಶ್ ರೈ, ಕೆನರಾ ಕಾಂಪ್ಲೆಕ್ಸ್ ನ ಮಾಲಕ ರಮಾನಾಥ್ ಕೆ. ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.

ಹಿತೈಷಿಗಳು, ಬಂಧುಗಳು ಆಗಮಿಸಿ ಶುಭ ಕೋರಿದರು.
ಶ್ರೀಮತಿ ರೂಪಶ್ರೀ ಜೆ. ರೈ ಕಾರ್ಯಕ್ರಮ ನಿರೂಪಿಸಿದರು.
ಮಾಲಕ ಜಯಂತ್ ರೈ ಎಲ್ಲರನ್ನೂ ಸ್ವಾಗತಿಸಿದರು.

ನೂತನ ಮಳಿಗೆ ಸುಳ್ಯದ ಮುಖ್ಯರಸ್ತೆ ಯ ಕೆನರಾ ಕಾಂಪ್ಲೆಕ್ಸ್ ನಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸೀಮಾ ಡಿಜಿಟಲ್ ಆರ್ಟ್ಸ್ & ಪ್ರಿಂಟರ್ಸ್ ನ ಮೇಲ್ಬಾಗ ಶುಭಾರಂಭಗೊಂಡಿದ್ದು, ಇಲ್ಲಿ ವಿವಿಧ ಶೈಲಿಯ ಸ್ಮರಣಿಕೆಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ಅಲ್ಲದೆ ಸನ್ಮಾನಕ್ಕೆ ಬೇಕಾದ ಶಾಲು, ಪೇಟ, ಹಾರಗಳು ಒಂದೇ ಮಳಿಗೆಯಲ್ಲಿ ದೊರೆಯಲಿದೆ ಎಂದು ಮಾಲಕರು ತಿಳಿಸಿದ್ದಾರೆ.