ನಿವೃತ್ತ ಶಿಕ್ಷಕಿ ತಿರುಮಲೇಶ್ವರಿ ನಿಧನ

0

ಸುಳ್ಯದ ಜಟ್ಟಿಪಳ್ಳ ನಿವಾಸಿ, ನಿವೃತ್ತ ಶಿಕ್ಷಕಿ ಶ್ರೀಮತಿ ತಿರುಮಲೇಶ್ವರಿಯವರು ಸೆಪ್ಟೆಂಬರ್ ೨೯ರಂದು ರಾತ್ರಿ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 63 ವರ್ಷ ವಯಸ್ಸಾಗಿತ್ತು.


ತಿರುಮಲೇಶ್ವರಿಯವರು ಶಿಕ್ಷಕಿಯಾಗಿ 38 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಬಾಂಜಿಕೋಡಿ, ಅಮರಪಡ್ನೂರು ಅಜ್ಜನಗದ್ದೆ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.


ಮೃತರು ಪತಿ ಗೋಪಾಲಕೃಷ್ಣ ಭಟ್, ಪುತ್ರ ಸಂದೀಪ್, ಪುತ್ರಿ ಶ್ರೀಮತಿ ಸಿಂಧು, ಸೊಸೆ ಶ್ರೇಷ್ಠ, ಅಳಿಯ ಕೃಷ್ಣ ಕಿರಣ್ ಭಾರದ್ವಾಜ್, ಮೊಮ್ಮಗಳು, ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.