ಹಿರಿಯ ಮೂವರು ವರ್ತಕರಿಗೆ ಗೌರವರ್ಪಣೆ
ಸುಧಾಕರ ರೈ ನೇತೃತ್ವ ಸಮಿತಿ ಪುನರಾಯ್ಕೆ
ಸುಳ್ಯ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘ ಸುಳ್ಯ ಇದರ ವಾರ್ಷಿಕ ಮಹಾಸಭೆಯು ಸೆ.30 ರಂದು ಮಧ್ಯಾಹ್ನ 3 ಗಂಟೆಗೆ ಅಂಬಟೆಡ್ಕ ದಲ್ಲಿರುವ ವರ್ತಕ ಸಮುದಾಯ ಭವನದಲ್ಲಿ ನಡೆಯಿತು.
ವರ್ತಕರ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಅಧ್ಯಕ್ಷತೆ ವಹಿಸಿದ್ದರು.
ವರ್ತಕರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಗಿರೀಶ್ ವಾರ್ಷಿಕ ವರದಿ ವಾಚಿಸಿ ಲೆಕ್ಕಪತ್ರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಹಿರಿಯ ವರ್ತಕರಾದ ಕೃಷ್ಣ ಕಾಮತ್ ಅರಂಬೂರು, ವಸಂತ ಭಟ್, ಎನ್ ದ್ವಾರಕ,ಕೆ.ಎ ಮಹಮ್ಮದ್ ಗಾಂಧಿನಗರ ಇವರನ್ನು ವರ್ತಕರ ಸಂಘದಿಂದ ಗೌರವಿಸಿ ಸನ್ಮಾನಿಸಲಾಯಿತು.
ವರ್ತಕರ ಸಂಘದ ಉಪಾಧ್ಯಕ್ಷರಾದ ರಾಮಚಂದ್ರ ಪಿ,ಸಿ ಎ ಗಣೇಶ್ ಭಟ್ ಪಿ,ಅಬ್ದುಲ್ ಹಮೀದ್ ಜನತಾ, ಆದಂ ಹಾಜಿ ಕಮ್ಮಾಡಿ,ಪ್ರಭಾಕರನ್ ನಾಯರ್,
ನಿರ್ದೇಶಕರಾದ ಟಿ.ಎಂ ಖಾಲಿದ್,ಎಂ ಸುಂದರ ರಾವ್,ಜಗನ್ನಾಥ ರೈ ಪಿ,ರಮೇಶ್ ಶೆಟ್ಟಿ, ಧರ್ಮಪಾಲ ಕುರುಂಜಿ,ಯು ಬಿ ಬಶೀರ್, ಎಸ್ ಅಬ್ದುಲ್ಲಾ ಕಟ್ಟೆಕ್ಕಾರ್, ಸಾಂಗ್ ಸಿಂಗ್,ಆದಿತ್ಯ ಕೃಷ್ಣ,ಶ್ಯಾಮ್ ಪ್ರಸಾದ್ ಅಡ್ಯಂತ್ತಡ್ಕ, ಮೊದಲಾದವರು ಉಪಸ್ಥಿತರಿದ್ದರು.
ಮುಂದಿನ ಅವದಿಗೂ ಇದೇ ಸಮಿತಿಯನ್ನು ಮುಂದುವರಿಸಲಾಯಿತು.
ಸಂಘದ ನಿರ್ದೇಶಕರಾದ ಅನೂಪ್ ಕೆ ಜೆ ಪ್ರಾರ್ಥಿಸಿ ಸಂಘದ ಅಧ್ಯಕ್ಷ ಪಿ ಬಿ ಸುಧಾಕರ ರೈ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಕಾರ್ಯದರ್ಶಿ ಗಳಾದ ಅಬ್ದುಲ್ ರಹಿಮಾನ್ ಎಸ್ ವೈ ಮತ್ತು ಲತಾ ಪ್ರಸಾದ್ ಕುದ್ಪಾಜೆ ನಿರೂಪಿಸಿ ವಂದಿಸಿದರೂ.