ಕರ್ನಾಟಕ ಸರಕಾರ, ತೋಟಗಾರಿಕೆ ಇಲಾಖೆ, ICCOA ಸಂಪನ್ಮೂಲ ಸಂಸ್ಥೆ ಬೆಂಗಳೂರು ಪ್ರಾಯೋಜಿತ ಪರಿವಾರ ಪಂಜ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಪಂಜ ಇದರ ವಾರ್ಷಿಕ ಮಹಾಸಭೆ ಮತ್ತು ಷೇರು ಪ್ರಮಾಣ ಪತ್ರ ವಿತರಣೆ ಹಾಗೂ ಕೃಷಿ ಮಾಹಿತಿ ಕಾರ್ಯಗಾರ ಕಾರ್ಯಕ್ರಮವು ಪಂಜದ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಜುವಾರಿ ಫಾರ್ಮ್ ಹಬ್ ಲಿಮಿಟೆಡ್ ವತಿಯಿಂದ ಕಲ್ಪವೃಕ್ಷ ಎಂಬ ಹೊಸ ಸಾವಯುವ ಗೊಬ್ಬರ ಹಾಗೂ ಅರೆಕಾ ಸ್ಪೆಷಲ್ ಎಂಬ ರಾಸಾಯನಿಕ ಗೊಬ್ಬರ ಬಿಡುಗಡೆ ಮತ್ತು ಅಡಿಕೆ ಬೆಳೆಯಲ್ಲಿ ಗೊಬ್ಬರ ನಿರ್ವಹಣೆ ಬಗ್ಗೆ ಮಾಹಿತಿ ನಡೆಯಿತು . ಮಣ್ಣು ಪರೀಕ್ಷೆಯ ಅಗತ್ಯತೆ, ಮಣ್ಣು ಪರೀಕ್ಷಾ ಮಾದರಿ ಸಂಗ್ರಹಣೆ ಬಗ್ಗೆ ತೋಟಗಾರಿಕೆ ಅಧಿಕಾರಿ ಜಗದೀಶ್ ಅವರು ಮಾಹಿತಿ ನೀಡಿದರು. ಮೀನು ಕೃಷಿಯ ಬಗ್ಗೆ ಪ್ರಗತಿಪರ ಕೃಷಿಕ
ಶ್ರೀಕೃಷ್ಣ ಭಟ್ ಪಟೋಳಿ ರವರು ತಮ್ಮ ಅನುಭವವನ್ನು ಹಂಚಿಕೊಂಡರು. ಅಧ್ಯಕ್ಷತೆಯನ್ನು ಕಂಪನಿ ಅಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ವಹಿಸಿದ್ದರು. ವೇದಿಕೆಯಲ್ಲಿ ತೋಟಗಾರಿಕಾ ಪ್ರಭಾರ ಹಿರಿಯ ಸಹಾಯಕ ನಿರ್ದೇಶಕಿ ಶ್ರೀಮತಿ ಸುಹಾನ ಪಿ ಕೆ, ICCOA ಸಂಸ್ಥೆ ಸಂಯೋಜಕರಾದ ಸತೀಶ್ ನಾಯ್ಕ್ ಹಾಗೂ ಪರಿವಾರ ಪಂಜ ರೈತ ಉತ್ಪಾದಕ ಕಂಪನಿಯ ನಿರ್ದೇಶಕರು, ಸಿ ಇ ಒ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ವಿನೋದ್ ಬೊಳ್ಮಲೆ ಸ್ವಾಗತಿಸಿದರು.ಉದಯಶಂಕರ್ ಅಡ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ಕಂಪನಿಯ ಪಾಲುದಾರ ಸದಸ್ಯರು, ಪ್ರಗತಿಪರ ಕೃಷಿಕರು ಉಪಸ್ಥಿತರಿದ್ದರು.