ಮರ್ಕಂಜ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ಆಗಿ ಜಯಂತ್ ಯು.ಬಿ ನಿಯೋಜನೆ – ಅಧಿಕಾರ ಸ್ವೀಕಾರ

0

ಮರ್ಕಂಜ ಗ್ರಾಮ ಪಂಚಾಯತ್ ನ ಪೂರ್ಣ ಪ್ರಭಾರ ಪಿಡಿಒ ಆಗಿ ಜಯಂತ್ ರವರು ನಿಯೋಜನೆಗೊಂಡಿದ್ದು ಅವರು ಸೆ.06ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಮರ್ಕಂಜ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದ ರವಿಚಂದ್ರರವರು ಅಧಿಕಾರ ಹಸ್ತಾಂತರಿಸಿದರು.


ಜಯಂತ್ ರವರು ಕೊಡಿಯಾಲ ಗ್ರಾಮ ಪಂಚಾಯತ್ ಪಿಡಿಒ ಆಗಿದ್ದರು.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.