ಮಾಜಿ ಶಾಸಕ ಎಸ್ ಅಂಗಾರ ರವರ ರೂ.25 ಲಕ್ಷ ರೂಪಾಯಿ ಅನುದಾನದಲ್ಲಿ ಕುಳಾಯಿತ್ತೋಡಿ -ಅಂಬಟೆಡ್ಕ ಸಂಪರ್ಕ ರಸ್ತೆ ಕಾಂಕ್ರಿಟೀಕರಣ ಗೊಂಡಿದ್ದು ಇದರ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಮಾಜಿ ಸಚಿವ ,ಶಾಸಕ ಎಸ್ ಅಂಗಾರ ರವರು ದೀಪ ಬೆಳಗಿಸಿದರು.ಕಾರ್ಯಕ್ರಮದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ, ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ಉಪಾಧ್ಯಕ್ಷೆ ಶ್ರೀಮತಿ ಮೋಹಿನಿ ರವರು ಉದ್ಘಾಟಿಸಿದರು. ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ ಸ್ವಾಗತಿಸಿದರು.
ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಆಕ್ರಿಕಟ್ಟೆ, ಲೋಕಯ್ಯ ಬೊಳಿಯೂರು, ಹರೀಶ್ ಮಾಳಪ್ಪಮಕ್ಕಿ, ಶ್ರೀಮತಿ ಮೀನಾಕ್ಷಿ ಬಾಲಕೃಷ್ಣ ಬೊಮ್ಮೆಟಿ, ಬಾಳಿಲ ಗ್ರಾಮ ಪಂಚಾಯತ್ ಸದಸ್ಯರಾದ ರವೀಂದ್ರ ರೈ, ಶ್ರೀಮತಿ ಸುಶೀಲಾ ಕಾಪಡ್ಕ, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ನಡುಬೈಲು, ಕಲ್ಮಡ್ಕ ಬೂತ್ ಸಮಿತಿ ಸಂಚಾಲಕ ರಮೇಶ್ ತಿಪ್ಪನಕಜೆ, ಕಾರ್ಯದರ್ಶಿ ತೀರ್ಥಾನಂದ, ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕಾರ್ಯಪ್ಪ ಗೌಡ, ಪಂಜ ಲಯನ್ಸ್ ಕ್ಲಬ್ ಪೂರ್ವಾಧ್ಯಕ್ಷ ಸುರೇಶ್ ಕುಮಾರ್ ನಡ್ಕ, ಪಡ್ಪಿನಂಗಡಿ ವಿನಾಯಕ ಭಜನಾ ಮಂದಿರದ ಅಧ್ಯಕ್ಷ ಧರ್ಮಪಾಲ ನಡ್ಕ , ಕಾರ್ಯದರ್ಶಿ ಬಾಲಕೃಷ್ಣ ಗೌಡ ಕುಳ್ಸಿಗೆ , ಶ್ರೀಧರ್ ಕುಳ್ಸಿಗೆ, ವೆಂಕಟ ಸುಬ್ಬಪ್ಪಯ್ಯ ಕಲ್ಮಡ್ಕ, ನರಸಿಂಹ ಭಟ್ ಮೂಲೆಮನೆ, ಪುರುಷೋತ್ತಮ ಬ್ರಾಂತಿಗದ್ದೆ,
ಉದಯ ಬ್ರಾಂತಿಗದ್ದೆ, ಚಂದ್ರಶೇಖರ ಅಳಕೆ, ಪದ್ಯಾಣ ಗೋಪಾಲಕೃಷ್ಣ ಭಟ್, ಯಶೋಧರ ಬೊಳಿಯೂರು, ಜನಾರ್ದನ ಕೊಳೆಂಜಿಕೋಡಿ, ಕಲ್ಮಡ್ಕ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಶಿವರಾಮ ಬಿ ಕಲ್ಮಡ್ಕ, ಚಂದ್ರಶೇಖರ ಪುಚ್ಚಮ್ಮ, ಮುತ್ತಪ್ಪ ಗೌಡ ಕುಳ್ಸಿಗೆ, ಅಶ್ವಥ್ ಕುಳ್ಸಿಗೆ, ಯತೀಶ್ ಮಾಳಿಗೆ, ಬಾಲಚಂದ್ರ, ಮೋನಪ್ಪ ಗೌಡ ಅಳಕೆ, ಶ್ರೀನಿವಾಸ ಜೋಗಿಬೆಟ್ಟು, ಹುಕ್ರಪ್ಪ ಮಾಳಪ್ಪಮಕ್ಕಿ, ಬೆಳ್ಳಪ್ಪ ದೇರೆಟಿ ಗುತ್ತಿಗೆದಾರ ರಘು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು, ಪಡ್ಪಿನಂಗಡಿ ಬೂತ್ ಸಮಿತಿ ಅಧ್ಯಕ್ಷ ಚಂದ್ರಶೇಖರ್ ರೈ ಮಾಳಿಗೆ, ಕಾರ್ಯದರ್ಶಿ ರವೀಂದ್ರ ಬ್ರಾಂತಿಗದ್ದೆ ರವರ ಮನವಿಗೆ ಸ್ಪಂದಿಸಿ ಆಗಿನ ಸಚಿವ ,ಶಾಸಕ ಎಸ್ ಅಂಗಾರ ರವರು ಅನುದಾನವನ್ನು ಒದಗಿಸಿದ್ದರು.