ಸಾಕು ಪ್ರಾಣಿ ರಸ್ತೆಗೆ ಬಿಟ್ಟರೆ ರೂ.2 ಸಾವಿರ ದಂಡ

0

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯದರ್ಶಿ ಪದ್ಮಾವತಿ ವರದಿ ಹಾಗೂ ಲೆಕ್ಕ ಪತ್ರ ಮಂದಿಸಿದರು.


ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಸ್ವಾಗತಿಸಿದರು. ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳಾದ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು ಹಾಗೂ ಲೆಕ್ಕ ಪರಿಸೋದನ ಸಮಿತಿ, ಸಾಮಾಜಿಕ ನ್ಯಾಯ ಸಮಿತಿಗಳಿಗೆ ಸದಸ್ಯರುಗಳನ್ನು ನೇಮಕ ಮಾಡಲಾಯಿತು.


ಗ್ರಂಥಾಲಯ ಮೇಲ್ವಿಚಾರಣ ಸಮಿತಿ ರಚಿಸಲಾಯಿತು. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಾಕು ಪ್ರಾಣಿ ಕಟ್ಟಿ ಹಾಕದೆ ಸಾಕುವವರ ಬಗ್ಗೆ ಚರ್ಚೆ ನಡೆದು ಮಾಲೀಕರಿಗೆ 2 ಸಾವಿರ ದಂಡನೆ ಹಾಕಲು ತೀರ್ಮಾನಿಸಲಾಯಿತು. ಕಡೆಪಾಲ, ಕೈಪಡ್ಕ ದನ, ಆಡು ಗಳನ್ನು ರಸ್ತೆಯಲ್ಲಿ ಬಿಡುತ್ತಿರುವ ಬಗ್ಗೆ ವ್ಯಾಪಕ ದೂರು ಬರುತಿದ್ದು ಸಾಕು ಪ್ರಾಣಿಗಳನ್ನು ಬಿಡುವವರ ವಿವರಣೆ ಪಡೆದು ದಂಡನೆ ಹಾಕುವುದು, ಕಡೆಪಾಲ ಮುಳ್ಳುಕುಂಜ ನಿವೇಶನ ಮಂಜೂರು ಅದವರ ಸಭೆ ಕರೆಯಲು ತೀರ್ಮಾನಿಸಲಾಯಿತು. ಪೇಟೆಯಲ್ಲಿ ವಾಹನ ಪಾರ್ಕಿಂಗ್ ಬಗ್ಗೆ ವರ್ತಕರು ಹಾಗೂ ವಾಹನ ಚಾಲಕರ ಹಾಗೂ ಪೊಲೀಸ್, ಕಂದಾಯ ಇಲಾಖೆಯ ಸಭೆ ಕರೆಯಲು ತೀರ್ಮಾನಿಸಲಾಯಿತು. ಸ್ವಚ್ಛತೆಯ ಸಂಪೂರ್ಣ ಉಸ್ತುವಾರಿ ನವಂಬರ್ ತಿಂಗಳಿಂದ ಸಂಜೀವಿನಿ ಒಕ್ಕೂಟಕ್ಕೆ ನೀಡುವುದು ಹಾಗೂ ಅಂಗಡಿಗಳಿಗೆ ಪ್ಲಾಸ್ಟಿಕ್ ಚೀಲ ಬಕೇಟ್ ನೀಡಿ ಹಸಿ ಹಾಗೂ ಒಣ ಕಸ ಸಂಗ್ರಹಿಸಲು ಹಾಗೂ ಸಂಗ್ರಹಿಸಿ ಎಂ. ಆರ್. ಎಫ್ ಘಟಕಕ್ಕೆ ನೀಡಲು ತೀರ್ಮಾನಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ದ್ರಷ್ಠಿ ಯಿಂದ. ಹಾಗೂ ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ತೊಂದರೆಯಗದಂತೆ ರಸ್ತೆಯ 2 ಬದಿಗಳಲ್ಲಿ ಫೂಟ್ ಬಾತ್ ಮೇಲೆ ಇರುವ ಬೋರ್ಡ್ ಇನಿತ್ತರ ಒತ್ತುವರಿ ತೆರವು ಗೊಳಿಸುವುದಾಗಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಮಾಜಿ ಅಧ್ಯಕ್ಷರುಗಳಾದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಸದಸ್ಯರು ಗಳಾದ ಅಬೂಸಾಲಿ, ಸವಾದ್ ಗೂನಡ್ಕ, ವಿಜಯ ಕುಮಾರ್, ವಿಮಲಾ ಪ್ರಸಾದ್, ರಜನಿ ಶರತ್, ಸುಶೀಲ, ಅನುಪಮಾ ಉಪಸ್ಥಿತರಿದ್ದರು.