ಸುಳ್ಯ ನಗರದ ಹಲವೆಡೆ ಬೀದಿ ನಾಯಿಗಳ ಕಾಟ…!

0

ನಗರ ಪಂಚಾಯತ್ ಹೊರಗೂ – ಒಳಗೂ ನಾಯಿ ಮರಿಗಳ ಆಟ

ಸುಳ್ಯ ನಗರ ವ್ಯಾಪ್ತಿಯ ಹಲವು ಕಡೆಗಳ ರಸ್ತೆಯಲ್ಲಿ‌ ಬೀದಿ‌ ನಾಯಿಗಳ ಗುಂಪು ರಸ್ತೆಯಲ್ಲಿ ಉರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಈ ನಾಯಿಗಳ ಹಾವಳಿಯಿಂದ ಮುಕ್ತಿ ದೊರಕಿಸಬೇಕೆಂದು ಸಾರ್ವಜನಿಕರು, ಸಂಘ ಸಂಸ್ಥೆಯವರು ನಗರ ಪಂಚಾಯತ್ ಗೆ ಮನವಿ ಸಲ್ಲಿಸಿದ್ದಾರೆ.

ಆದರೆ ವಿಪರ್ಯಾಸವೆಂದರೆ ನಗರ ಪಂಚಾಯತ್ ಆವರಣದಲ್ಲಿಯೂ ನಾಯಿಗಳ ಕಾಟ ಆರಂಭಗೊಂಡಿದೆ. ಸುಳ್ಯ ನಗರ ಪಂಚಾಯತ್ ಜಗಲಿಯಲ್ಲಿ ನಾಯಿ‌ ಮರಿಗಳು ಆಟ ವಾಡುತ್ತಿರುವ ದೃಶ್ಯ ಹಾಗೂ‌ ಮರಿಯೊಂದು ಕಚೇರಿಯೊಳಗೆ ಅಡ್ಡಾಡುವ ದೃಶ್ಯವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.