ಯೇನೆಕಲ್ಲು ಗ್ರಾಮದ ಚಿದ್ಗಲ್ ವಸಂತ ಗೌಡರು ಅಸೌಖ್ಯದಿಂದ ಇಂದು ಸಂಜೆ ನಿಧನರಾದರು. ಇವರಿಗೆ 63 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಉಮಾವತಿ, ಪುತ್ರ ಸುಜಿತ್, ಪುತ್ರಿ ಉಪನ್ಯಾಸಕಿಯಾಗಿರುವ ಕು. ಮೇಘ, ಸಹೋದರರಾದ ನಿವೃತ್ತ ಎ.ಎಸ್.ಐ ಲೋಕೇಶ್ ಚಿದ್ಗಲ್, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಸಹೋದರಿಯರಾದ ಸುಳ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರೇಮಾವತಿ ದೊಡ್ಡಣ್ಣ ಗೌಡ ಬರೆಮೇಲು, ಮಂಗಳೂರಿನಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿರುವ ಶ್ರೀಮತಿ ರೂಪ ಧರ್ಮಪಾಲ ಗೌಡ ಸೇರಿದಂತೆ ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತಿಮ ಸಂಸ್ಕಾರ ನಾಳೆ ಬೆಳಿಗ್ಗೆ ನಡೆಯಲಿದೆಯೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.