ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ತರಬೇತಿ ಶಿಬಿರ ಉದ್ಘಾಟನೆ

0

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್. ಸ್ಥಳೀಯ ಸಂಸ್ಥೆ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ
ಮತ್ತು ಸ.ಪ.ಪೂ.ಕಾಲೇಜು ಸುಳ್ಯ ದ ಸಹಯೋಗದಲ್ಲಿ ಪಟಾಲಂ ಮತ್ತು ಷಟ್ಕಾನಾಯಕರ ತರಬೇತಿ ಶಿಬಿರ ಅ. 9ಮತ್ತು 10 ರಂದುಸ.ಪ.ಪೂ.ಕಾಲೇಜು ಸುಳ್ಯದಲ್ಲಿ ಜರಗಿತು.


ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಎಸ್‌.ಡಿ‌.ಎಂ.ಸಿ. ಅಧ್ಯಕ್ಷೆ ಶ್ರೀಮತಿ ರಾಜೇಶ್ವರಿ ವಹಿಸಿದ್ದರು. ಸುಳ್ಯ ಲಯನ್ ಕ್ಲಬ್ ನ ಅಧ್ಯಕ್ಷರಾದ ವೀರಪ್ಪ ಗೌಡ ಕಣ್ಕಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ವೇದಿಕೆಯಲ್ಲಿ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಶಶಿಧರ್ ಎಂ.ಜೆ., ಗೌರವ ಅಧ್ಯಕ್ಷರಾದ ಬಾಪೂ ಸಾಹೇಬ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕಿ ಶ್ರೀಮತಿ ಸಂಧ್ಯಾ ಕುಮಾರಿ, ಸ.ಪ.ಪೂ.ಕಾಲೇಜಿನ ಉಪಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರೇಮಲತಾ ಎ ಹೆಚ್.,ಶಿಬಿರದ ನಾಯಕರಾದ ಶ್ರೀ ಹರಿ ಪೈಂದೋಡಿ ಮತ್ತು ಶ್ರೀಮತಿ ರೇವತಿ ಉಪಸ್ಥಿತರಿದ್ದರು.
ಶಶಿಧರ್ ಎಂ.ಜೆ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಪ್ರೇಮಲತಾ ಎ ಹೆಚ್ ವಂದಿಸಿದರು.
ಸಭೆಯಲ್ಲಿ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಮತ್ತು ಲಯನ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುಳ್ಯ ವಲಯದ ,ಸ್ಕೌಟ್ಸ್ 40, ಗೈಡ್ಸ್ 74, ಕಬ್ 13, ಬುಲ್ ಬುಲ್ 27, ಒಟ್ಟು 154, ಮತ್ತು ಸ.ಪ.ಪೂ.ಕಾಲೇಜಿನ ಎಲ್ಲಾ ಸ್ಕೌಟ್ಸ್, ಗೈಡ್ಸ್ ಸುಮಾರು 150 ,ಹಾಗೂ ಸ್ಕೌಟರ್ಸ್,ಗೈಡರ್ಸ್, ಕಬ್ ಮಾಸ್ಟರ್ಸ್,ಫ್ಲಾಕ್ ಲೀಡರ್ಸ್–ಒಟ್ಟು 31 ಶಿಕ್ಷಕರು ಭಾಗವಹಿಸಿದ್ದರು .ಎನ್.ಎಮ್.ಸಿ.ಯ 9 ರೇಂಜರ್ಸ್, ರೋವರ್ಸ್ ಸಹಕರಿಸಿದರು.