ಅರಂತೋಡು: ಎನ್ನೆಂಸಿ ವಿದ್ಯಾರ್ಥಿಗಳಿಂದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜನ್ಮದಿನಾಚರಣೆ

0

ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸೇರಿಕೊಂಡು ಪೀಪಲ್ಸ್ ಪ್ರೆಸಿಡೆಂಟ್, ಭಾರತದ ಮಾಜಿ ರಾಷ್ಟ್ರಪತಿಗಳಾದ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ 92ನೇ ಜನ್ಮದಿನದಂದು 18×18 ಅಡಿ ಗಾತ್ರದ ಬೃಹದಾಕಾರದಲ್ಲಿ 81 ಡ್ರಾಯಿಂಗ್ ಶೀಟ್ ಬಳಸಿ ಅಬ್ದುಲ್ ಕಲಾಂ ಅವರ ಚಿತ್ರರಚಿಸಿ “ಕಲಾಂ ತಾತನಿಗೆ ಜನ್ಮದಿನದ ಸಲಾಂ”ಎಂಬ ಶೀರ್ಷಿಕೆಯಡಿಯಲ್ಲಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾಗೆ‌ 92ನೇ ಜನ್ಮ ಜಯಂತಿಯ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.