ಗಿರಿದರ್ಶಿನಿ ಮಹಿಳಾ ಭಜನಾ ತಂಡದ ಉದ್ಘಾಟನೆ

0

ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಆಶ್ರಯದಲ್ಲಿರುವ ಮಹಿಳಾ ಸಮಿತಿ ವತಿಯಿಂದ ಗಿರಿಸರ್ಶಿನಿ ಭಜನಾ ತಂಡದ ಉದ್ಘಾಟನೆ ಅ. 15ರಂದು ಸುಳ್ಯದ ಅಂಬಟೆಡ್ಕದಲ್ಲಿರುವ ಗಿರಿದರ್ಶಿನಿ ಸಭಾ ಭವನದಲ್ಲಿ ನಡೆಯಿತು.

ಮಹಿಳಾ ವೇದಿಕೆ ಅಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ್ ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಘದ ಗೌರವಾಧ್ಯಕ್ಷ ಹಾಗೂ ಲ್ಯಾಂಪ್ ಸೊಸೈಟಿ ಅಧ್ಯಕ್ಷ ಸೀತಾನಂದ ಭೇರ್ಪಡ್ಕ ಮತ್ತು ಮರಾಟಿ ಸಂಘದ ಅಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್ ಶುಭ ಹಾರೈಸಿದರು. ಕೋಶಾಧಿಕಾರಿ ಜನಾರ್ಧನ ನಾಯ್ಕ್ ಕೇರ್ಪಳ, ಮಹಿಳಾ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಕುಸುಮಾ ಜನಾರ್ಧನ್, ಸದಸ್ಯರಾದ ಶ್ರೀಮತಿ ಹರಿಣಾಕ್ಷಿ ಸೀತಾನಂದ, ಶ್ರೀಮತಿ ರೇವತಿ ದೊಡ್ಡೇರಿ, ಶ್ರೀಮತಿ ಶೋಭ ಬೆಳ್ಳಾರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.