✍️ಕು.ನಿರೀಕ್ಷಾ ಸುಲಾಯ
ಬಂತು ಬಂತು ನವರಾತ್ರಿ ಹಬ್ಬ
ತಿಂಡಿ ತಿನಿಸುಗಳ ಮಹಾ ಡಬ್ಬ
ಎಲ್ಲ ಮನೆಗಳಲ್ಲೂ ಸಂಭ್ರಮವೋ ಸಂಭ್ರಮ
ಇಂದಿನಿಂದ ಬದಲಿಸೋಣ ನಮ್ಮ ಜೀವನಕ್ರಮ
ಪ್ರಥಮ ದಿನದ ಪೂಜೆ ಶೈಲಾಪುತ್ರಿಗೆ
ಎಲ್ಲ ಕೆಲಸಗಳನ್ನು ಇಡುವೆವು ಬದಿಗೆ
ದ್ವಿತೀಯ ದಿನದ ಪೂಜೆ ಬ್ರಹ್ಮಚಾರಿಣಿಗೆ
ಸಲ್ಲಿಸುವೆವು ನಮ್ಮ ಪ್ರೀತಿ ಹರಕೆಗಳನ್ನು ತಪ್ಪದೇ
ತೃತೀಯ ದಿನದ ಪೂಜೆ ಚಂದ್ರಗಂಟಾಳಿಗೆ
ಸ್ಪಂದಿಸುವಳು ತನ್ನ ಉಪಾಸಕರ ನೋವು ನಳಿವುಗಳಿಗೆ
ಚತುರ್ಥ ದಿನದ ಪೂಜೆ ಕೂಷ್ ಮಾಂಡಾಳಿಗೆ
ಒಡೆಯನಾಗಿ ಮಾಡುವಳು ಸಂಪತ್ತು ವೈಡೂರ್ಯಗಳಿಗೆ
ಪಂಚಮಿ ದಿನದ ಪೂಜೆ ಸ್ಕಂದಮಾತ ದೇವಿಗೆ
ಮೋಕ್ಷ, ಶಕ್ತಿ, ಸಮೃದ್ಧಿ, ಸಂಪತ್ತು ಒದಗಿಸುವಳು ನಮಗೆ
ಆರನೆಯ ದಿನದ ಪೂಜೆ ಕಾತ್ಯಾಯಿನಿ ದೇವಿಗೆ
ಈಕೆ ಯಾವಾಗಲೂ ಸಿದ್ಧ ಸುಜನರ ರಕ್ಷಣೆಗೆ
ಏಳನೆಯ ದಿನದ ಪೂಜೆ ಕಾಳರಾತ್ರಿ ತಾಯಿಗೆ
ಮಹಾ ತೊಂದರೆಗಳಿಂದ ದಾರಿ ತೋರಿಸುವಳು ಮುಕ್ತಿಗೆ
ಎಂಟನೇ ದಿನದ ಪೂಜೆ ಮಹಾಗೌರಿ ತಾಯಿಗೆ
ಮನಶಾಂತಿಯನ್ನು ಒದಗಿಸುವಳು ನಮ್ಮ ಮನಸ್ಸುಗಳಿಗೆ
ಕೊನೆಯ ದಿನದ ಪೂಜೆ ದೇವಿ ಸಿದ್ಧಿಧಾತ್ರಿಗೆ
ಅಲೌಕಿಕ ಶಕ್ತಿಯನ್ನು ನೀಡುವಳು ಈ ಮಹಾರಾತ್ರಿಗೆ
ಈ ಎಲ್ಲಾ ಅವತಾರಗಳು ಒಂದೇ ಮಾತೆಯದು
ಅದೇ ನಮ್ಮ ನಿಮ್ಮೆಲರ ನೆಚ್ಚಿನ ದುರ್ಗಾಂಬೆಯದು
- ಕು.ನಿರೀಕ್ಷಾ ಸುಲಾಯ
೯ನೇ ತರಗತಿ
ರೋಟರಿ ಹೈಸ್ಕೂಲ್ ಸುಳ್ಯ ದ.ಕ.