ಕನಕಮಜಲು: ಕಣ್ಣಿನ ಉಚಿತ ತಪಾಸಣಾ ಶಿಬಿರ

0

ಕಣ್ಣಿನ ಪೊರೆ ಚಿಕಿತ್ಸೆ ಹಾಗೂ ನೇತ್ರದಾನದ ಕುರಿತು ಮಾಹಿತಿ

ಕನಕಮಜಲು ಗ್ರಾಮ ಪಂಚಾಯತಿ, ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ(ನಿ). ಜಾಲ್ಸೂರು, ಯುವಕ ಮಂಡಲ ಕನಕಮಜಲು ಇದರ ಪ್ರಾಯೋಜಕತ್ವದಲ್ಲಿ ಎನ್.ವಿ.ಜಿ‌. ಸುರತ್ಕಲ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಅಂಧತ್ವ ವಿಭಾಗ ಇದರ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಶಿಬಿರವು ಕನಕಮಜಲು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಅ.15ರಂದು ನಡೆಯಿತು.

ಕನಕಮಜಲು ಗ್ರಾ.ಪಂ. ಉಪಾಧ್ಯಕ್ಷರಾದ ರವಿಚಂದ್ರ ಕಾಪಿಲ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭಹಾರೈಸಿದರು‌.

ಗ್ರಾಮ ಪಂಚಾಯತ್ ಕಾರ್ಯದರ್ಶಿ ರಮೇಶ್ ಟಿ, ಯುವಕಮಂಡಲದ ಅಧ್ಯಕ್ಷ ರಕ್ಷಿತ್ ಅಕ್ಕಿಮಲೆ, ಕಾರ್ಯದರ್ಶಿ ಸ್ವಸ್ತಿಕ್ ಕುತ್ಯಾಳ,
ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ಗೌಡ ಬೊಮ್ಮಟ್ಟಿ, ಸುರತ್ಕಲ್ ಎನ್.ವಿ.ಜಿ. ಸಂಸ್ಥೆಯ ವ್ಯವಸ್ಥಾಪಕ ಹೇಮಚಂದ್ರ, ಗ್ರಾ.ಪಂ. ಮಾಜಿ ಅಧ್ಯಕ್ಷ ಶ್ರೀಧರ ಕುತ್ಯಾಳ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಗ್ರಾಮಸ್ಥರು ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡಿದ್ದು,
ಶಿಬಿರದಲ್ಲಿ ಕಂಪ್ಯೂಟರಿಕೃತ ಕಣ್ಣಿನ ಉಚಿತ ತಪಾಸಣೆ ನಡೆಸಲಾಯಿತು. ಕಣ್ಣಿನ ಪೊರೆ ಚಿಕಿತ್ಸೆಯ ಹಾಗೂ ನೇತ್ರದಾನದ ಕುರಿತು ಅಗತ್ಯವುಳ್ಳವರಿಗೆ ಮಾಹಿತಿ ನೀಡಲಾಯಿತು.