ಅ.22: ಕಮಿಲಡ್ಕ ದುರ್ಗಾದೇವಿ ಮಂದಿರದಲ್ಲಿ ಮಹಾನವರಾತ್ರಿ ಉತ್ಸವ

0

ಉಬರಡ್ಕ ಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಅ. 22 ರಂದು ಮಹಾನವರಾತ್ರಿ ಉತ್ಸವವು ನಡೆಯಲಿರುವುದು.
ಅ.16ರಂದು ಕದಿರು ಕಟ್ಟುವ ಕಾರ್ಯಕ್ರಮ ಹಾಗೂ ಹೊಸ ಅಕ್ಕಿ ನವಾನ್ನ ಭೋಜನದ ಕಾರ್ಯಕ್ರಮ ನಡೆಯಲಿರುವುದು.
ಅ.22 ರಂದು ಬೆಳಗ್ಗೆ ಭಜನಾ ಕಾರ್ಯಕ್ರಮ ನಂತರ ಶ್ರೀ ಮಹಾವಿಷ್ಣು ಮೂರ್ತಿ ದೈವದ ದರ್ಶನ ಸೇವೆ ಬಳಿಕ ಮಾರಿಕಳ ಪ್ರವೇಶವಾಗಿ ಹರಕೆಯ ತುಲಾಭಾರ ಸೇವೆಯು ನಡೆಯಲಿರುವುದು. ಸಂದರ್ಭದಲ್ಲಿ ವಿಶೇಷವಾಗಿ ಪ್ರೇತಾ ಉಚ್ಚಾಟನೆ ಹಾಗೂ ಭಕ್ತರಿಂದ ಹರಕೆ ಒಪ್ಪಿಸುವ ಕಾರ್ಯಕ್ರಮ ನಡೆಯಲಿದೆ.
ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಣೆಯಾಗಿ ಅನ್ನಸಂತರ್ಪಣೆಯು ನಡೆಯಲಿರುವುದು. ಸಂಜೆ ಮಂಗಳ ಸ್ನಾನದೊಂದಿಗೆ ಉತ್ಸವವು ಸಮಾಪನಗೊಂಡು ಸಾರ್ವಜನಿಕ ಆಯುಧ ಪೂಜೆಯು ನಡೆಯಲಿರುವುದು ಎಂದು ಶ್ರೀದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರು ತಿಳಿಸಿರುತ್ತಾರೆ.