ಕೊಡಗು ಸಂಪಾಜೆ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಭಕ್ತಾದಿಗಳ ಸಭೆಯು ಸಮಿತಿಯ ಅಧ್ಯಕ್ಷರಾದ ಎಂ. ಬಿ.ಸದಾಶಿವ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ವೇದಿಕೆಯಲ್ಲಿಕಾರ್ಯಾಧ್ಯಕ್ಷ
ರುಗಳಾದ ಸೋಮಶೇಖರ ಕೊಯಿಂಗಾಜೆ, ಅನಂತ್ ಎನ್ ಸಿ. ಊರುಬೈಲು, ಪ್ರಧಾನ ಕಾರ್ಯದರ್ಶಿ ರಾಜಾರಾಮ ಕಳಗಿ
ಕಾರ್ಯದರ್ಶಿ ಲೋಹಿತ್ ಹೊದ್ದೆಟ್ಟಿ
ಆಡಳಿತ ಮಂಡಳಿ ಅಧ್ಯಕ್ಷ ಜಯಕುಮಾರ ಚೆದ್ಕಾರ್
ಶ್ರೀಮತಿ ಇಂದಿರಾ ದೇವಿಪ್ರಸಾದ್ ಗ್ರಾ.ಪಂ. ಅಧ್ಯಕ್ಷೆ ರಮಾದೇವಿ ಕಳಗಿ, ಚೆಂಬು ಗ್ರಾ.ಪಂ. ಅಧ್ಯಕ್ಷ ತೀರ್ಥರಾಮ ಪೂಜಾರಿಗದ್ದೆ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿಜ್ಞಾಪನೆ ಪತ್ರ ಹಾಗೂ ರಶೀದಿ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು. ದೇವಸ್ಥಾನದ ಮೊಕ್ತೇಸರ ಹಾಗೂ ಸಮಿತಿಯ ಅಧ್ಯಕ್ಷರಾದ ಎಂ. ಬಿ. ಸದಾಶಿವ ಅವರು ಐವತ್ತು ಸಾವಿರ ರೂ. ನೀಡುವುದರ ಮೂಲಕ ಆರ್ಥಿಕ ಕ್ರೂಢೀಕರಣಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಜೀರ್ಣೋದ್ಧಾರದ ಕುರಿತಂತೆ ಭಕ್ತಾಭಿಮಾನಿಗಳಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಲಾಯಿತು.
ಶ್ರೀಮತಿ ವಿಮಲ ರವಿ ಬಂಟೋಡಿ ಪ್ರಾರ್ಥಿಸಿ, ರಾಜಾರಾಮ ಕಳಗಿ ಅವರು ಸ್ವಾಗತಿಸಿದರು. ಲೋಹಿತ್ ಹೊದ್ದೆಟ್ಟಿ ವಂದಿಸಿದರು.