ಮಕ್ಕಳ ಮನಸ್ಸಿನಲ್ಲಿ ಭಕ್ತಿ ಶ್ರದ್ಧೆಯ ಭಾವನೆ ಮೂಡಲು ಭಜನೆ ಪ್ರೇರಣೆಯಾಗುವುದು : ಎಸ್.ಅಂಗಾರ
ಸುಳ್ಯ ಕಸಬಾದ ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ
ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಹಾಗೂ ಸುಳ್ಯ ತಾಲೂಕು ಭಜನಾ ಪರಿಷತ್ ಸಹಯೋಗದಲ್ಲಿ ಐದು ದಿನಗಳ ಕಾಲ ನಡೆದ ತಾಲೂಕು ಮಟ್ಟದ ಮಕ್ಕಳ ಭಜನಾ ತರಬೇತಿ ಶಿಬಿರದ ಮಂಗಲೋತ್ಸವ ವು ಅ.15 ರಂದು ನಡೆಯಿತು.
ಶಿಬಿರದಲ್ಲಿ ಭಾಗವಹಿಸಿದ್ದ ಸುಮಾರು 180ಕ್ಕೂ ಮಿಕ್ಕಿ ಮಕ್ಕಳು ಬೆಟ್ಟಂಪಾಡಿ ಪರಿಸರದ ಪ್ರಮುಖ ಬೀದಿಗಳಲ್ಲಿ ಕುಣಿತ ಭಜನೆಯ ಆಕರ್ಷಕ ಮೆರವಣಿಗೆಯೊಂದಿಗೆ ಸಾಗಿ ಬಂದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಮಾಜಿ ಸಚಿವ ಎಸ್ .ಅಂಗಾರ ರವರು ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ಅವಿನ್ ಬೆಟ್ಟಂಪಾಡಿ ವಹಿಸಿದ್ದರು.
ಅತಿಥಿಗಳಾಗಿ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ವಿನಯ್ ಕುಮಾರ್ ಕಂದಡ್ಕ, ಕೆ.ಎಫ್.ಡಿ.ಸಿ ಗಾರ್ಡನ್ ಹಾಸ್ಪಿಟಲ್ ಮುಖ್ಯ ವೈದ್ಯಾಧಿಕಾರಿ ಡಾ. ಸಾಯಿ ಗೀತಾ ಜ್ಞಾನೇಶ್, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರದ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಭಜನಾ ತರಬೇತುದಾರರಾಗಿ ಮಹಾಲಕ್ಷ್ಮಿ ಪ್ರಕಾಶ್ ಮರ್ಕಂಜ, ಸದಾನಂದ ಆಚಾರ್ಯ ಕಾಣಿಯೂರು, ರಮೇಶ್ ಮೆಟ್ಟಿನಡ್ಕ, ಶಿವಪ್ರಸಾದ್ ಆಲೆಟ್ಟಿ, ರಾಜ್ ಮುಖೇಶ್ ಬೆಟ್ಟಂಪಾಡಿ, ಉಷಾ ಉಬರಡ್ಕ, ವಿನೋದ್ ಅರಂಬೂರು, ಲಕ್ಷ್ಮೀಶ ಅಡ್ಕಾರ್, ಸನತ್ ಆಚಾರ್ಯ ಜಯನಗರ ತರಬೇತಿ ನೀಡಿದರು.
ಲಕ್ಷ್ಮೀಶ್ ಪ್ರಾರ್ಥಿಸಿದರು.
ಶಿವಪ್ರಸಾದ್ ಆಲೆಟ್ಟಿ ಸ್ವಾಗತಿಸಿ, ಅವಿನ್ ಬೆಟ್ಟಂಪಾಡಿ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೆ ಪ್ರಮಾಣ ಪತ್ರ ಮತ್ತು ಹನುಮಾನ್ ಚಾಲೀಸ್ ಪುಸ್ತಕವನ್ನು ವಿತರಿಸಲಾಯಿತು. ಮುಖೇಶ್ ಬೆಟ್ಟಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ಮಕ್ಕಳ ಪೋಷಕರು ಹಾಗೂ ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದರು.
ಭಜನಾ ಮಂದಿರದ ಹಾಗೂ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.