ನನ್ನ ಮಣ್ಣು ನನ್ನ ದೇಶ – ಅಮೃತ ಕಲಶ ಯಾತ್ರೆ : ಸುಳ್ಯದಲ್ಲಿ ‌ಜಾಥಾ

0

ತಾಲೂಕಿನ ಗ್ರಾ.ಪಂ. ಗಳಿಂದ ಸಂಗ್ರಹಿಸಲಾದ ಮಣ್ಣು ಹಸ್ತಾಂತರ

ತಾಲೂಕು ಆಡಳಿತ ಸುಳ್ಯ, ತಾಲೂಕು ಪಂಚಾಯತ್ ಸುಳ್ಯ, ನಗರ ಪಂಚಾಯತ್ ಸುಳ್ಯ, ಅಂಚೆ ಇಲಾಖೆ ಸುಳ್ಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲಬೈಲು, ಯುವಜನ ಸಂಯುಕ್ತ ಮಂಡಳಿ ಸುಳ್ಯ, ರೋಟರಿ ಕ್ಲಬ್ ಸುಳ್ಯ, ರೋಟರಿ ಸಿಟಿ ಸುಳ್ಯ, ಲಯನ್ಸ್ ಕ್ಲಬ್ ಸುಳ್ಯ, ರಾಷ್ಟ್ರೀಯ ಸೇವಾ ಯೋಜನೆ ಘಟಕ ಸುಳ್ಯ ಇದರ ಸಹಯೋಗದೊಂದಿಗೆ ನನ್ನ ಮಣ್ಣು ನನ್ನ ದೇಶ ಅಮೃತ ಕಲಶ ಯಾತ್ರೆಯ ಮೆರವಣಿಗೆಯು ಸುಳ್ಯದ ಜ್ಯೋತಿ ಸರ್ಕಲ್ ಬಳಿಯಿಂದ ಆರಂಭಗೊಂಡು ತಾಲೂಕು ಪಂಚಾಯತ್ ನಲ್ಲಿ ಸಮಾಪ್ತಿಗೊಂಡಿತು.

ಮೆರವಣಿಗೆಯಲ್ಲಿ‌ಭಾಗವಹಿಸಿದವರೆಎಲ್ಲರೂ ತಾಲೂಕು ಪಂಚಾಯತ್ ನ ಎದುರು ಸೇರಿದರು. ಅಲ್ಲಿ ಕ್ಷೇತ್ರದ ಶಾಸಕಿ ಕು.ಭಾಗೀರಥಿ ‌ಮುರುಳ್ಯರು ತಾಲೂಕಿನ 25 ಗ್ರಾಮ ಪಂಚಾಯತ್ ಗಳಿಂದ ಸಂಗ್ರಹಿಸಲಾಗಿದ್ದ ಮಣ್ಣು ತುಂಬಿದ ಕಲಶವನ್ನು ಸುಳ್ಯದಿಂದ ದೆಹಲಿಗೆ ತೆರಳಲಿರುವ‌ ಶ್ರವಣ್ ರಿಗೆ ಹಸ್ತಾಂತರ ಮಾಡಿ, ಶುಭ ಹಾರೈಸಿದರು.

ನಗರ ಪಂಚಾಯತ್ ‌ಮುಖ್ಯಾಧಿಕಾರಿ ಎಂ.ಹೆಚ್.ಸುಧಾಕರ್ ಪ್ರತಿಜ್ಞೆ ಬೋಧನೆ ಮಾಡಿದರು.

ತಾಲೂಕು ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿದರು. ಯುವಜನ ಸೇವಾ ಕ್ರೀಢಾಧಿಕಾರಿ ದೇವರಾಜ್ ಮುತ್ಲಾಜೆ ಕಾರ್ಯಕ್ರಮ ನಿರೂಪಿಸಿದರು.

ಸುಳ್ಯ ತಹಶೀಲ್ದಾರ್ ‌ಮಂಜುನಾಥ್ ಸಹಿತ, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.