ಶತಾಯುಷಿ ರಾಮಣ್ಣ ಗೌಡ ಪೂಜಾರಿಮನೆ ನಿಧನ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಪೂಜಾರಿಮನೆ ಶತಾಯುಷಿ ರಾಮಣ್ಣ ಗೌಡರವರು ಅ.16 ರಂದು ನಿಧನರಾದರು.
ಅವರಿಗೆ 103 ವರ್ಷ ಪ್ರಾಯವಾಗಿತ್ತು.


ಮೃತರು ಪುತ್ರ ಮಾಧವ ಗೌಡ ಪೂಜಾರಿ ಮನೆ,ಸೊಸೆ ಶ್ರೀಮತಿ ಪ್ರೇಮಲತಾ ಮತ್ತು ಮೊಮ್ಮಕ್ಕಳು,ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕರಾದ ಇವರು ಸುಮಾರು 45 ವರ್ಷಗಳ ಕಾಲ ಚೊಕ್ಕಾಡಿ ಮುನ್ನೂರು ಒಕ್ಕಲಿನ ಆರಾಧ್ಯ ದೈವ ಚೊಕ್ಕಾಡಿ ಉಳ್ಳಾಕುಲು ದೈವಸ್ಥಾನದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು.