ವಾರದ ಹಿಂದೆ ಕಾಣೆಯಾಗಿರುವ ಬಳ್ಪ ಗ್ರಾಮ ಬೀದಿಗುಡ್ಡೆ ಸಮೀಪದ ಯುವತಿ ಮಂಗಳೂರಿನಲ್ಲಿರುವ ಶಂಕೆ ವ್ಯಕ್ತವಾಗಿದೆ.
ಆಕೆ ಕಾಣೆಯಾಗಿರುವ ಕುರಿತು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಆಕೆ ಮಂಗಳೂರಿನಲ್ಲಿರುವ ಮಾಹಿತಿ ಪಡೆದು ಪೋಲೀಸರು ಅಲ್ಲಿಗೆ ಹೋದಾಗ ಆಕೆ ಅಲ್ಲಿಂದ ಬೇರೆಡೆಗೆ ಹೋಗಿರುವುದಾಗಿ ಗೊತ್ತಾಯಿತೆಂದು ತಿಳಿದುಬಂದಿದೆ.