ದುಬೈಯಲ್ಲಿ ಅನ್ಸಾರಿಯ ಯುಎಇ ರಾಷ್ಟ್ರೀಯ ಸಮಿತಿ ಬೃಹತ್ ಮಿಲಾದ್ ಸಮಾವೇಶ ಹಾಗೂ ಮೌಲೂದ್ ಮಜ್ಲಿಸ್

0

ಜಿಸಿಸಿ ಸಮಿತಿಯ ಕನಸು ಅದಷ್ಟೂ ಬೇಗ ಸಾಕಾರಗೊಳ್ಳಲಿ: ಡಾ ಬೀಜದಕಟ್ಟೆ

ನನ್ನ ಯಶ್ಸಸಿಗೆ ಕಾರಣ ಅನ್ಸಾರಿಯ ಶಿಕ್ಷಣ ಸಂಸ್ಥೆ: ಆಸೀಫ್ ದೊಡ್ಡಡ್ಕ

ಅನ್ಸಾರಿಯ ಎಜುಕೇಶನ್ ಸೆಂಟರ್ ಸುಳ್ಯ ಇದರ ಯುಎಇ ರಾಷ್ಟ್ರೀಯ ಸಮಿತಿ ಮತ್ತು ಕೆಎ21 ವಾಟ್ಸಪ್ ಗ್ರೂಪ್ ಇದರ ವತಿಯಿಂದ ದೇರ ದುಬೈಯ ಖಾಲಿದ್ ಮಸೀದಿ ಬಳಿಯಿರುವ ಕಾಸ್ರಕೋಡ್ ರೆಸ್ಟೋರೆಂಟ್ ನಲ್ಲಿ ಬೃಹತ್ ಮಿಲಾದ್ ಸಮಾವೇಶ ಮತ್ತು ಮೌಲೂದ್ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಬೆಂಗಳೂರು ಪಾರ್ಮೇಡ್ ಗ್ರೂಪ್ ಅಫ್ ಕಂಪೆನಿಯ ಹಿರಿಯ ಉಪಾಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಉದ್ಘಾಟಿಸಿದರು.


ಅನ್ಸಾರಿಯ ಅಭಿವೃದ್ಧಿಯಲ್ಲಿ ಅನಿವಾಸಿ ಭಾರತೀಯರ ಸೇವೆ ಅಪಾರವಾದದ್ದು ಅನ್ಸಾರಿಯ ಜಿಸಿಸಿ ಸಮಿತಿಯ ಕನಸಿನ ಕೂಸು ಅನ್ಸಾರಿಯ ಶಾದಿಮಹಲ್ ಅದರ ಕಾಮಗಾರಿ ಆದಷ್ಟೂ ಬೇಗ ಪೂರ್ತಿಗೊಳ್ಳಲಿ, ಅನ್ಸಾರಿಯ ಗಲ್ಪ್ ಸಮಿತಿಯ ಯೋಜನೆಗೆ ಮತ್ತೊಮ್ಮೆ ಎಲ್ಲರೂ ಕೈಜೋಡಿಸಿ ಎಂದು ಕಾರ್ಯಕ್ರಮ ಉದ್ಘಾಟಿಸಿ ವಿನಂತಿಸಿದರು.

ಅನ್ಸಾರಿಯ ಅಜ್ಮಾನ್ ಸಮಿತಿ ಖಾದರ್ ಸಹದಿ ಅಜ್ಮಾನ್ ದುವಾಶಿರ್ವಚನ ನೀಡಿ ಮೌಲೂದ್ ಮಜ್ಲಿಸ್ ಗೆ ನೇತೃತ್ವ ವಹಿಸದ್ದರು.
ಅನ್ಸಾರಿಯ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಝೈನುದ್ದೀನ್ ಬೆಳ್ಳಾರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅನ್ಸಾರಿಯ ಯುಎಇ ಸಮಿತಿ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಪತ್ರಕರ್ತ ಶರೀಫ್ ಜಟ್ಟಿಪಳ್ಳ, ಡಾ.ರಿಜ್ವಾನ್ ಸುಳ್ಯ, ದಾರುಲ್ ಹುದಾ ತಂಬಿನಮಕ್ಕಿಯ ಉಸ್ತಾದ್ ಕಲೀಲ್ ಹಿಮಮಿ ಮೊದಲಾದವರು ಅತಿಥಿಗಳಾಗಿ ಉಪಸ್ಥಿತರಿದ್ದರು.

ಅನ್ಸಾರಿಯ ಹಳೇ ವಿದ್ಯಾರ್ಥಿ ಪ್ರಸ್ತುತ ಯುಎಇಯ ಕಂಪೆನಿಯಲ್ಲಿ ಫೈನಾನ್ಸಿಯಲ್ ಕಂಟ್ರೋಲರಾಗಿ ಉದ್ಯೋಗ ನಿರ್ವಹಿಸುತ್ತಿರುವ ಆಸೀಫ್ ದೊಡ್ಡಡ್ಕರವರು ಮಾತನಾಡಿ ಅನ್ಸಾರಿಯದಲ್ಲಿ ಪದವಿಯವರೆಗೆ ಶಿಕ್ಷಣ ಪಡೆದದ್ದು ನನ್ನ ಜೀವನದಲ್ಲಿ ಯಶಸ್ಸಿಗೆ ಕಾರಣ ಎಂದವರು ಹೇಳಿದರು.

ಅನ್ಸಾರಿಯ ಸಮಿತಿಯ ಹಮೀದ್ ಜಟ್ಟಿಪಳ್ಳ, ಶಾರ್ಜಾ ಸಮಿತಿ ಅಬ್ದುಲ್‌ ನಾಸೀರ್, ಹಮೀದ್ ಕಬಾಯಿಲ್ ಪೆರಾಜೆ, ಬಶೀರ್ ಅರಂಬೂರು,ಝಕೀರ್ ಗಾಂಧಿನಗರ, ಮೊಯ್ದಿನ್ ಟರ್ಲಿ,ಹನೀಫ್ ಎಣ್ಮೂರ್,ಕಾಶಿಂ ಕಬಾಯಿಲ್,ಬದ್ರುದ್ದೀನ್ ಪಟೇಲ್, ರಿಪಾಯಿ ಗೂನಡ್ಕ, ಪಯಾಜ್ ಜಟ್ಟಿಪಳ್ಳ, ರವೂಪ್ ಜಟ್ಟಿಪಳ್ಳ, ಖಾದರ್ ಸಿ ಎ,ವಿ.ಕೆ ನಾಸೀರ್ ಜಟ್ಟಿಪಳ್ಳ, ವಿ.ಕೆ ರಶೀದ್ ಜಟ್ಟಿಪಳ್ಳ,ಹಝ್ರತ್ ಖಲೀಲ್,ಯಹ್ಯಾ ಕಡಬ,ಝಕರಿಯ ಅಡಿಬಾಯಿ,ಅನ್ವರ್ ಶಿರೂರ್, ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಾ.ಉಮ್ಮರ್ ಬೀಜದಕಟ್ಟೆ, ಡಾ.ರಿಜ್ವಾನ್ ಸುಳ್ಯ, ಶರೀಫ್ ಜಟ್ಟಿಪಳ್ಳ ಗೌರವಿಸಿ ಸನ್ಮಾನಿಸಲಾಯಿತು.

ಅನ್ಸಾರಿಯ ಯುಎಇ ಸಮಿತಿ ಇಕ್ಬಾಲ್ ಕನಕಮಜಲು ಸ್ವಾಗತಿಸಿ ಅನ್ಸಾರಿಯ ಯುಎಇ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಮುನೀರ್ ಜಟ್ಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.