ಪಂಜ ಲಯನ್ಸ್ ಕ್ಲಬ್ ವತಿಯಿಂದ “ವಿಶ್ವ ಆಹಾರ ದಿನಾಚರಣೆ” ಆಚರಣೆ

0

ಪಂಜ ಆರೋಗ್ಯ ಕೇಂದ್ರದಲ್ಲಿರುವ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

 ಲಯನ್ಸ್ ಕ್ಲಬ್ ಪಂಜ ಇದರ ವತಿಯಿಂದ ಅ.16ರಂದುವಿಶ್ವ ಆಹಾರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಪಂಜ  ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ರವರು  ಉಪಸ್ಥಿತರಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲ.ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು. 

ನಂತರ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲನ್ನು ವಿತರಣೆ ಮಾಡಲಾಯಿತು, ನಂತರ ಕಾರ್ಯದರ್ಶಿ ಲ.ವಾಸುದೇವ ಮೇಲ್ಪಾಡಿಯವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಪ್ರಥಮ ಉಪಾಧ್ಯಕ್ಷ ಲ. ಶಶಿಧರ ಪಳಂಗಾಯ, ವಲಯ್ಯಾಧ್ಯಕ್ಷ ಲ. ಸಂತೋಷ್ ಜಾಕೆ, ಲ. ಪೂರ್ವಧ್ಯಕ್ಷ ಲ. ಸುರೇಶ್ ನಡ್ಕ, ಲ. ಬಾಲಕೃಷ್ಣ ಗೌಡ ಮೂಲೆ ಮನೆ, ಕೋಶಾಧಿಕಾರಿ ಲ. ಆನಂದ ಗೌಡಹಾಗೂ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.