ಕೇರ್ಪಡ : ಕೆರೆಗೆ ಬಿದ್ದು ಮೃತಪಟ್ಟ ಮಹಿಳೆಯ ಗುರುತು ಪತ್ತೆ

0

ಕೇರ್ಪಡದಲ್ಲಿ ಕೆರೆಗೆ ಬಿದ್ದು ಮೃತಪಟ್ಟ ಮಹಿಳೆಯ ಗುರುತು ಪತ್ತೆಯಾಗಿದೆ.

ಎಡಮಂಗಲ ಗ್ರಾಮದ ಕೇರ್ಪಡ ಸುಂದರ ಗೌಡರ ತೋಟದಲ್ಲಿರುವ ಕೆರೆಗೆ ಮಹಿಳೆಯೋರ್ವರು ಬಿದ್ದು ಮೃತಪಟ್ಟಿದ್ದು, ಇಂದು ಬೆಳಿಗ್ಗೆ ಮನೆಯವರು ತೋಟಕ್ಕೆ ಅಡಿಕೆ ಹೆಕ್ಕಲೆಂದು ಹೋದಾಗ ಮೃತದೇಹ ತೇಲುತ್ತಿರುವುದು ಕಂಡುಬಂತು. ನಂತರ ಊರವರು ಸ್ಥಳದಲ್ಲಿ ಸೇರಿದರು. ನಂತರ ಗುರುತು ಪತ್ತೆ ಹಚ್ಚಲಾಯಿತು.

ಕೇರ್ಪಡ ದಿ. ಹುಕ್ರ ರವರ ಪತ್ನಿ ಗಿರಿಜಾರವರ ಶವ ಎಂದು ಗುರುತಿಸಲಾಗಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದರು.
ಗಿರಿಜಾ ರವರಿಗೆ 50 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರ ಲೋಕೇಶ್ ರನ್ನು ಅಗಲಿದ್ದಾರೆ.