ಕೃಷಿಕರ ತೋಟಕ್ಕೆ ನಿರಂತರ ದಾಳಿ
ಮಂಡೆಕೋಲು ಗ್ರಾಮದಲ್ಲಿ ಆನೆಗಳ ಹಿಂಡು ಕೃಷಿಕರ ತೋಟಗಳಿಗೆ ನುಗ್ಗಿ ಕೃಷಿ ಹಾನಿಗೊಳಿಸುವ ಕಾರ್ಯ ನಿರಂತರ ಮುಂದುವರಿಸುತಿದೆ.
ಕಳೆದ ವಾರವಷ್ಟೇ ಚಾಕೋಟೆ ಭಾಗದ ಕೃಷಿಕರ ತೋಟಕ್ಕೆ ಆನೆಗಳ ಹಿಂಡು ಬಂದುಕೃಷಿ ಹಾನಿಗೊಳಿಸಿತ್ತು. ಈ ವಾರದಲ್ಲಿ ಕಳೆದ ಮೂರು ದಿನಗಳಿಂದಲೂ ಚಾಕೋಟೆ, ಬೊಳುಗಲ್ಲು ಭಾಗದಲ್ಲಿ ಆನೆಗಳು ತೋಟಗಳಿಗೆ ಬಂದು ಕೃಷಿಗೆ ತೊಂದರೆಯುಂಟು ಮಾಡುತಿವೆ.
ಚಾಕೋಟೆಯ ಜಗದೀಶ್ ಎಂಬವರ ತೋಟಕ್ಕೆಬಂದ ಆನೆಗಳು ತೆಂಗಿನ ಗಿಡ, ಅಡಿಕೆ ಮರ, ಬಾಳೆ ಗಿಡಗಳನ್ನು ಮಗುಚಿ, ಹಾನಿಗೊಳಿಸಿವೆ. ತೋಟದ ಪೈಪ್ ಗಳನ್ನು ಪುಡಿಮಾಡಿವೆ. ಅರಣ್ಯ ಇಲಾಖೆಯವರು ಭೇಟಿ ನೀಡಿ ಪರಿಶೀಲನೆ ನಡೆಸಿರುವುದಾಗಿ ತಿಳಿದುಬಂದಿದೆ.
ಮಂಡೆಕೋಲು ಭಾಗದಲ್ಲಿ ಆನೆಗಳು ಕೃಷಿ ತೋಟಕ್ಕೆ ಬರುತಿವೆ. ಇದರಿಂದ ಕೃಷಿ ಹಾನಿಗೊಳ್ಳುತಿವೆ. ಹೀಗೆ ಮುಂದುವರಿದರೆ ಕೃಷಿಯೇ ನಾಶವಾಗಿ ನಮಗೆ ಸಮಸ್ಯೆ ಎದುರಾಗಬಹುದು. ಸರಕಾರ ಹಾಗೂ ಇಲಾಖೆ ಶಾಶ್ವತ ಪರಿಹಾರ ಆಗಬೇಕು ಎಂದು ಜಗದೀಶ್ ಚಾಕೋಟೆ ಒತ್ತಾಯಿಸಿದ್ದಾರೆ.