ಮಕ್ಕಳನ್ನು ವಿಚಾರಿಸಿದ ಸ್ಥಳೀಯರು – ಪೋಲೀಸರ ಆಗಮನ
ತಂದೆ – ತಾಯಿಯೊಂದಿಗಿದ್ದ ಮಕ್ಕಳಿಬ್ಬರು ಅವರೊಂದಿಗೆ ಹೇಳದೇ ಮನೆ ತೊರೆದ ಘಟನೆ ವರದಿಯಾಗಿದೆ.
ಈಶ್ವರಮಂಗಳದ ಇಬ್ಬರು ಮಕ್ಕಳು ಇಂದು ಸಂಜೆ ವೇಳೆಗೆ ಅಜ್ಜಾವರದ ಅಡ್ಪಂಗಾಯ ಬಸ್ ನಿಲ್ದಾಣದಲ್ಲಿ ಇರುವುದನ್ನು ಕಂಡ ಊರವರು ಆ ಮಕ್ಕಳನ್ನು ವಿಚಾರಿಸಿದಾಗ ನಾವು ಈಶ್ವರಮಂಗಲದವರು. ಮನೆಯಲ್ಲಿ ಜಗಳ ಹಾಗಾಗಿ ನಡೆದುಕೊಂಡೇ ಬಂದಿದ್ದೇವೆ ಎಂದು ಹೇಳಿದರೆನ್ನಲಾಗಿದೆ. ಪೋಲೀಸರಿಗೆ ವಿಷಯ ತಿಳಿದು ಪೋಲೀಸರು ಹೋಗಿ ಮಕ್ಕಳನ್ನು ವಿಚಾರಿಸಿ, ಆ ಇಬ್ಬರು ಮಕ್ಕಳನ್ನು ಮತ್ತೆ ಮನೆಗೆ ಸೇರಿಸಲು ಪ್ರಯತ್ನ ನಡೆಸುತಿರುವುದಾಗಿ ತಿಳಿದುಬಂದಿದೆ.
ಸ್ಥಳೀಯರು ಮಕ್ಕಳಿಗೆ ಚಾ – ತಿಂಡಿನೀಡಿ ಉಪಚರಿಸಿರುವುದಾಗಿ ತಿಳಿದುಬಂದಿದೆ.