ಅಜ್ಜಾವರ ಪಲ್ಲತಡ್ಕದಲ್ಲಿ ಸಿಡಿಲು ಬಡಿದು ಹಾನಿ

0

ಅಜ್ಜಾವರ ಗ್ರಾಮದ ಮೇನಾಲ‌- ಪಲ್ಲತಡ್ಕ ಎಂಬಲ್ಲಿ ನಿನ್ನೆ ಸಂಜೆ ಮನೆಗೆ ಸಿಡಿಲು ಬಡಿದು‌ ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

ಸಂಜೆ ಸುಮಾರು 5 ಗಂಟೆ ವೇಳೆಗೆ ಈ ಘಟನೆ ನಡೆದಿದೆ.‌ ಪಲ್ಲತಡ್ಕದ‌ ಹೇಮಲತಾ ಎಂಬವರ ಮನೆಯ ಹಿಂಬದಿ ಗೋಡೆಗೆ ಸಿಡಿಲು ಬಡಿಯಿತೆಂದು ಪರಿಣಾಮ ಮನೆಯ ನೆಲದ ಟೈಲ್ಸ್ ಒಡೆದಿದೆ. ಇನ್ ವರ್ಟರ್ ಸಹಿತ, ವಯರಿಂಗ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳು ಹಾನಿಗೊಂಡಿವೆ ಎಂದು ತಿಳಿದುಬಂದಿದೆ.