ಆಲೆಟ್ಟಿ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ

0

ಉತ್ಸವ-ಸಾಮೂಹಿಕ ಆಯುಧ ಪೂಜೆ

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅ.15 ರಿಂದ 23 ರ ತನಕ ನವರಾತ್ರಿ ಉತ್ಸವವು ಜರುಗಿತು.
ಪ್ರತಿದಿನ ಸಂಜೆ ಸ್ಥಳೀಯ ಭಜಕರಿಂದ ಭಜನಾ ಕಾರ್ಯಕ್ರಮ ಹಾಗೂ ವಿಶೇಷವಾಗಿ ಶ್ರೀ ದುರ್ಗಾ ಪೂಜೆಯು ನೆರವೇರಿತು.
ಸ್ಥಳೀಯ ಭಕ್ತಾದಿಗಳು ಸೇವಾ ರೂಪದಲ್ಲಿ ಪೂಜೆ ಮತ್ತು ಭಜನಾ ಸೇವೆಯನ್ನು ಸಮರ್ಪಿಸಿದರು. ಪ್ರಧಾನ ಅರ್ಚಕ ಹರ್ಷಿತ್ ಬನ್ನಿಂತಾಯ, ಸಹ ಅರ್ಚಕ ರಘುರಾಮ ಭಟ್ ರವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಅ.23 ರಂದು ಸಾಮೂಹಿಕ ಆಯುಧ ಪೂಜೆಯು ನಡೆಯಿತು. ಬಳಿಕ ಭಜನಾ ಕಾರ್ಯಕ್ರಮ ನಡೆದು ಮಹಾಮಂಗಳಾರತಿಯಾಗಿ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಿತು.


ದೇವಸ್ಥಾನದ ಅನುವಂಶಿಕ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಜನಾ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸಹಕರಿಸಿದರು.