ಆಲೆಟ್ಟಿ:ಶ್ರೀ ಉಳ್ಳಾಕುಲು ಚಾವಡಿಗೆ ದಾರಂದ ಮುಹೂರ್ತ

0

ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನಕ್ಕೆ ಸಂಬಂಧಿಸಿದ ಶ್ರೀ ಉಳ್ಳಾಕುಲು ಚಾವಡಿ ನಿರ್ಮಾಣದ ಕಾರ್ಯ ನಡೆಯುತ್ತಿದ್ದು ದಾರಂದ ಮುಹೂರ್ತ ಕಾರ್ಯಕ್ರಮ ಇಂದು ಬೆಳಗ್ಗೆ ಶಿಲ್ಪಿಗಳ ನೇತೃತ್ವದಲ್ಲಿ ನಡೆಯಿತು.

ಮೊರಂಗಲ್ಲು ಎಂಬಲ್ಲಿ ಐಡಿಯಲ್ ಭಾಸ್ಕರ ಗೌಡ ರವರು ದಾನವಾಗಿ ನೀಡಿದ ಮೂಲ ಸ್ಥಾನದಲ್ಲಿ ದೈವಜ್ಞರ ಚಿಂತನೆಯಂತೆ ಉಳ್ಳಾಕುಲು ಚಾವಡಿ ನಿರ್ಮಾಣವು ಭರದಿಂದ ನಡೆಯುತ್ತಿದ್ದು ಶಿಲ್ಪಿ ಜಯಕರ ಆಚಾರ್ಯ ಕಾವು ರವರ ನೇತೃತ್ವದಲ್ಲಿ ಮರದ ಕೆಲಸ ಕಾರ್ಯ ಪೂರ್ಣಗೊಂಡು ದಾರಂದ ಇರಿಸುವ ಕಾರ್ಯವನ್ನು ವಿಧಿವತ್ತಾಗಿ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಪವಿತ್ರ ಪಾಣಿ ಹೇಮಚಂದ್ರ ಬೈಪಡಿತ್ತಾಯ, ಶ್ರೀಪತಿ ಬೈಪಡಿತ್ತಾಯ, ಸಮಿತಿ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ತೀರ್ಥಕುಮಾರ್ ಕುಂಚಡ್ಕ, ಜೀ.ಸ.ಅಧ್ಯಕ್ಷ ಎನ್.ಎ.ರಾಮಚಂದ್ರ, ಕೃಪಾಶಂಕರ ತುದಿಯಡ್ಕ, ಗುಂಡ್ಯ ಮಾಡಾರಮನೆ ಉಳ್ಳಾಕುಲು ದೈವಸ್ಥಾನದ ಅಧ್ಯಕ್ಷ ಅಶೋಕ ಪ್ರಭು ಸುಳ್ಯ, ಜಯಪ್ರಕಾಶ್ ಕುಂಚಡ್ಕ, ಐಡಿಯಲ್ ಭಾಸ್ಕರ ಗೌಡ, ಕೊರಗಪ್ಪ ಮಾಸ್ತರ್ ಕಣಕ್ಕೂರು, ಪ್ರಸನ್ನ ಕೆ.ಸಿ.ಬಡ್ಡಡ್ಕ, ಅರ್ಚಕ ಹರ್ಷಿತ್ ಬನ್ನಿಂತಾಯ, ವ್ಯವಸ್ಥಾಪನಾ ಸಮಿತಿ ಸದಸ್ಯರು, ಸೇವಾ ಸಮಿತಿ ಸದಸ್ಯರು, ಭಜನಾ ಸಂಘದ ಪದಾಧಿಕಾರಿಗಳು, ಸದಸ್ಯರು, ಗುಂಡ್ಯ, ದೇವಸ್ಯ, ಪರಿವಾರ, ಪಂಜಿಮಲೆ ನಾಲ್ಕು ಸ್ಥಾನಿಕ ಮನೆಯವರು ಹಾಗೂ ಗ್ರಾಮದ ಭಕ್ತಾದಿಗಳು ಉಪಸ್ಥಿತರಿದ್ದರು.