ಶ್ರೀರಾಮ ಭಜನಾ ಮಂಡಳಿ ಮಡಪ್ಪಾಡಿ ಹಾಗೂ ಯುವಕ ಮಂಡಲ ಮಡಪ್ಪಾಡಿ ಸಹಯೋಗದಲ್ಲಿ ಅ.23ರಂದು ಸನ್ಮಾನ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಯುವಕ ಮಂಡಲ ಸಭಾಭವನ ಮಡಪ್ಪಾಡಿಯಲ್ಲಿ ನಡೆಯಿತು. ಗತ ಸಾಲಿನ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಶೇ.80ಕ್ಕಿಂತ ಅಧಿಕ ಅಂಕ ಗಳಿಸಿದ ಸ್ಥಳೀಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷರಾದ ಹೇಮಕುಮಾರ್ ಹಾಡಿಕಲ್ಲು ವಹಿಸಿದ್ದರು. ಮಾಜಿ ಎಪಿಯಂಸಿ ಅದ್ಯಕ್ಷರಾದ ವಿನಯ ಕುಮಾರ್ ಮುಳುಗಾಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ಮೇನಾಲ ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಉಷಾ ಜಯರಾಂ, ಮಡಪ್ಪಾಡಿ ಸೊಸೈಟಿ ಅಧ್ಯಕ್ಷರಾದ ಪಿ.ಸಿ ಜಯರಾಮ, ಮಡಪ್ಪಾಡಿ ಪಂಚಾಯತು ಸದಸ್ಯರಾದ ಜಯರಾಮ ಹಾಡಿಕಲ್ಲು, ಮಡಪ್ಪಾಡಿ ಶಾಲೆ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸಚಿನ್ ಬಳ್ಳಡ್ಕ, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ನಿರ್ದೇಶಕರಾದ ಲೋಹಿತ್ ಬಾಳಿಕಳ, ಮಡಪ್ಪಾಡಿ ಯುವಕ ಮಂಡಲದ ಅಧ್ಯಕ್ಷರಾದ ಧನ್ಯಕುಮಾರ್ ದೇರುಮಜಲು ಉಪಸ್ಥಿತರಿದ್ದರು.
ಕಳೆದ ಸಾಲಿನ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಯಲ್ಲಿ ಶೇ 80ಕ್ಕಿಂತ ಅಧಿಕ ಅಂಕ ಪಡೆದ 3 ವಿದ್ಯಾರ್ಥಿಗಳು ಹಾಗೂ ಪಿಯುಸಿಯಲ್ಲಿ ಶೇ.80 ಕ್ಕಿಂತ ಅಧಿಕ ಅಂಕ ಪಡೆದ 14 ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಹೇಮಕುಮಾರ್ ಹಾಡಿಕಲ್ಲು ಸ್ವಾಗತಿಸಿದರು. ಸದಾನಂದ ಬಲ್ಕಜೆ ವಂದಿಸಿದರು. ರಂಜಿತ್ ಶೀರಡ್ಕ ಕಾಯ೯ಕ್ರಮ ನಿರೂಪಿದರು. ಮನ್ವಂತ್ ಗೋಳ್ಯಾಡಿ ಸಹಕರಿಸಿದರು.